ಅತಿಯಾದ ಮದ್ಯಸೇವನೆ ಆರೋಗ್ಯಕ್ಕೆ ಹಾನಿಕರ ಅನ್ನೋದು ಗೊತ್ತೇ ಇದೆ. ಇದರಿಂದ ಲಿವರ್ ಸಿರೋಸಿಸ್ ಕೂಡ ಉಂಟಾಗಬಹುದು. ಮದ್ಯ ಸೇವನೆಯನ್ನು ಹೊರತುಪಡಿಸಿ ಲಿವರ್ ಸಮಸ್ಯೆಗೆ ಕಾರಣವಾಗಬಹುದಾದ ಇತರ ಅಂಶಗಳು ಯಾವುವು ನೋಡೋಣ.
ಬೊಜ್ಜು : ಬೊಜ್ಜಿನ ಸಮಸ್ಯೆ ಇರುವವರಿಗೆ ಲಿವರ್ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಯಾಕಂದ್ರೆ ಒಬೆಸಿಟಿ ಸಿರೋಸಿಸ್ ಗೆ ಲಿಂಕ್ ಆಗಿದ್ದು, ಲಿವರ್ ವೈಫಲ್ಯವೂ ಉಂಟಾಗಬಹುದು. ದೇಹದಲ್ಲಿ ಅತಿಯಾದ ಬೊಜ್ಜಿನಂಶ ಇದ್ರೆ ಅದು ಲಿವರ್ ನಲ್ಲಿ ಸೇರಿಕೊಂಡು ಅಪಾಯ ಉಂಟುಮಾಡುತ್ತದೆ.
ಅತಿಯಾದ ಉಪ್ಪು ಸೇವನೆ : ಅತಿಯಾದ ಉಪ್ಪು ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಿಂದ ಯಕೃತ್ತಿನಲ್ಲಿ ದ್ರವ ಉತ್ಪಾದನೆಯಾಗಿ ಊತ ಕಾಣಿಸಿಕೊಳ್ಳುತ್ತದೆ.
ಧೂಮಪಾನ : ಧೂಮಪಾನದಿಂದ ಯಕೃತ್ತಿನ ಕಾರ್ಯನಿರ್ವಹಣೆ ಮೇಲೆ ನೇರವಾದ ಪರಿಣಾಮವಿಲ್ಲ. ಆದ್ರೆ ಸಿಗರೇಟಿನಲ್ಲಿರುವ ಅಪಾಯಕಾರಿ ರಾಸಾಯನಿಕಗಳು ಲಿವರ್ ಸೆಲ್ಸ್ ಗೆ ಹಾನಿ ಉಂಟುಮಾಡುತ್ತವೆ. ಇದರಿಂದ ಯಕೃತ್ತಿನ ಮೇಲೆ ಒತ್ತಡ ಹೆಚ್ಚಾಗುತ್ತದೆ.
ಡಯಾಬಿಟಿಸ್ : ಸಕ್ಕರೆ ಖಾಯಿಲೆ ಇರುವವರಿಗೆ ಲಿವರ್ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಯಾಕಂದ್ರೆ ಅವರ ರಕ್ತದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾಗಿರುತ್ತದೆ. ಇದರಿಂದ ಹೊಟ್ಟೆಯ ತೂಕ ಜಾಸ್ತಿಯಾಗಿ ಲಿವರ್ ಖಾಯಿಲೆ ಕಾಣಿಸಿಕೊಳ್ಳಬಹುದು.