
ನೀವು ಏನೇ ತಿನ್ಬೇಕು ಅಂದ್ರೂ ಸ್ಪೂನ್ ಬಳಸ್ತೀರಾ ? ಸ್ಪೂನ್ ಇಲ್ಲದೆ ಏನಾದರೂ ತಿನ್ಬೇಕು ಅಂದ್ರೆ ನಿಮಗೆ ಕಿರಿಕಿರಿ ಅನ್ಸತ್ತಾ ? ಹಾಗಾದ್ರೆ ನೀವು ಈ ಸ್ಟೋರಿ ಓದಲೇಬೇಕು. ಸ್ಪೂನ್ ನಲ್ಲಿ ತಿನ್ನುವುದು ಹೈಜಿನ್ ವಿಷಯದಲ್ಲಿ ಬಹಳ ಒಳ್ಳೆಯದು ಅಂತ ನೀವು ಅಂದುಕೊಂಡಿರಬಹುದು. ಆದರೆ ಇದು ಖಂಡಿತ ತಪ್ಪು.
ಆಹಾರ ಸೇವನೆಗೆ ಕೈಯನ್ನ ಬಳಸಿದರೆ ಹೈಜಿನ್ ಪಾಲಿಸೋಕೆ ಆಗಲ್ಲ ಅನ್ನೋದು ಸರಿಯಾದ ವಿಚಾರ ಅಲ್ಲ. ನೀವು ಹೈಜಿನ್ ನ ಬಗ್ಗೆ ತುಂಬಾ ಕಾಳಜಿ ವಹಿಸೋರಾದ್ರೆ ಸ್ಪೂನ್ ನಿಂದಲೂ ರೋಗಾಣುಗಳು ಹರಡಬಹುದು. ಪ್ರತಿ ಸಲ ತಿನ್ನುವಾಗಲು ಸ್ಪೂನ್ ಅನ್ನು ಬಿಸಿ ನೀರಿನಲ್ಲಿ ಕುದಿಸಿ ನಂತರ ಬಳಸಬೇಕು, ಆದ್ರೆ ಇದು ಕಷ್ಟ.
ಆದರೆ ನಮ್ಮ ಕೈಯನ್ನು ಸ್ವಚ್ಛವಾಗಿ ತೊಳೆದು ಆಹಾರ ಸೇವನೆ ಮಾಡಬಹುದು. ಸ್ಪೂನಿಗಿಂತ ಕೈ ಯಾಕೆ ಬೆಸ್ಟ್ ಅಂದ್ರೆ ನಮ್ಮ ಕೈ ಒಟ್ಟು ಐದು ಬೆರಳುಗಳಿಂದ ಕೂಡಿದೆ ಅಲ್ವಾ? ಈ ಐದು ಬೆರಳುಗಳು ಪಂಚಭೂತಗಳನ್ನ ಪ್ರತಿನಿಧಿಸುತ್ತೆ. ಗಾಳಿ, ನೀರು, ಆಕಾಶ, ವಾಯು ಹಾಗೆ ಅಗ್ನಿಯ ತತ್ವಗಳು ನಮ್ಮ ಐದೂ ಬೆರಳುಗಳಲ್ಲಿ ಅಡಗಿದೆಯಂತೆ. ಹಾಗಾಗಿ ನಾವು ಸ್ವತಃ ನಮ್ಮ ಕೈಯಿಂದಲೇ ಆಹಾರವನ್ನ ಸೇವನೆ ಮಾಡುವುದರಿಂದ ಈ ಪಂಚತತ್ವಗಳ ಶಕ್ತಿ ಆಹಾರದ ಮೂಲಕ ನಮ್ಮ ದೇಹ ಸೇರುತ್ತೆ.
ಆಹಾರ ಸೇವನೆಗೆ ಸ್ಪೂನ್ ಬಳಸಿದರೆ ಈ ಯಾವ ತತ್ವಗಳು ಅಥವಾ ಶಕ್ತಿಯು ನಮ್ಮ ದೇಹಕ್ಕೆ ಸಂಚಯವಾಗುವುದಿಲ್ಲ. ಹಾಗಾಗಿ ಭಾರತೀಯರು ಬಹಳ ಹಿಂದಿನಿಂದಲೂ ಆಹಾರದ ಬಗ್ಗೆ ಆಹಾರ ತಿನ್ನುವ ಕ್ರಮದ ಬಗ್ಗೆ ತಮ್ಮದೇ ಆದ ವೈಜ್ಞಾನಿಕ ವಿಚಾರಧಾರೆಗಳನ್ನು ಹೊಂದಿದ್ದರು. ಆದರೆ ಇಂದು ನಾವು ಪಾಶ್ಚಾತ್ಯ ಜೀವನಶೈಲಿಗೆ ಮಾರುಹೋಗಿ ಪ್ರತಿಯೊಂದು ವಿಚಾರದಲ್ಲೂ ಅಂಧಾನುಕರಣೆ ಮಾಡುತ್ತಿದ್ದೇವೆ.