alex Certify ಝೂಮ್ ಕರೆಯಲ್ಲಿದ್ದಾಗಲೇ ಕೆಲಸ ಕಳೆದುಕೊಂಡ 900 ಉದ್ಯೋಗಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಝೂಮ್ ಕರೆಯಲ್ಲಿದ್ದಾಗಲೇ ಕೆಲಸ ಕಳೆದುಕೊಂಡ 900 ಉದ್ಯೋಗಿಗಳು

ತನ್ನ ಉದ್ಯೋಗಿಗಳಿಗೆ ಝೂಮ್ ಕಾಲ್ ಮುಖಾಂತರ ಸಭೆ ನಡೆಸಿದ ಬೆಟರ್ ಡಾಟ್ ಕಾಮ್ ಸಿಇಒ ವಿಶಾಲ್ ಗಾರ್ಗ್, ತಮ್ಮ ಕಂಪನಿಯಿಂದ 900 ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ.

ಸಭೆಯ ಭಾಗವಾಗಿದ್ದ ಉದ್ಯೋಗಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಕರೆಯನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಕಂಪನಿ ಸಿಇಒ ಪರ ಹಾಗೂ ವಿರೋಧದ ಚರ್ಚೆ ನಡೆಯುತ್ತಿದೆ.

ಇದು ನೀವು ಕೇಳಲು ಬಯಸುವ ಸುದ್ದಿಯಾಗಿಲ್ಲ. ನೀವು ಈ ಕರೆಯಲ್ಲಿ ಇದ್ದರೆ, ವಜಾಗೊಳಿಸಲಾಗಿರುವ ದುರದೃಷ್ಟಕರ ಗುಂಪಿನ ಭಾಗವಾಗಿದ್ದೀರಿ. ಇಲ್ಲಿ ನಿಮ್ಮ ಉದ್ಯೋಗವನ್ನು ತಕ್ಷಣವೇ ಕೊನೆಗೊಳಿಸಲಾಗುತ್ತದೆ ಎಂದು ಸಿಇಒ ವಿಶಾಲ್ ಗಾರ್ಗ್ ಹೇಳಿದ್ದಾರೆ.

ಇದು ನಿಜವಾಗಿಯೂ ಸವಾಲಿನ ನಿರ್ಧಾರವಾಗಿದೆ ಎಂದಿರುವ ಸಿಇಒ, ತಮ್ಮ ವೃತ್ತಿಜೀವನದಲ್ಲಿ ಎರಡನೇ ಬಾರಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಕಾನ್ಫರೆನ್ಸ್ ಕರೆಯ ಸಮಯದಲ್ಲಿ ತಿಳಿಸಿದ್ದಾರೆ.

ಮೊದಲ ಬಾರಿಗೆ ಅವರು ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕಿದಾಗ ಬಹಳ ಬೇಸರಪಟ್ಟುಕೊಂಡು ಅತ್ತಿದ್ದರಂತೆ. ಆದರೆ, ಈ ಬಾರಿ ಮಾತ್ರ ಅವರು ಬಹಳ ಕಠಿಣ ಪರಿಸ್ಥಿತಿಯನ್ನು ದೃಢನಿರ್ಧಾರದಿಂದ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.

ಮಾರುಕಟ್ಟೆ, ದಕ್ಷತೆ, ಕಾರ್ಯಕ್ಷಮತೆ ಮತ್ತು ಉತ್ಪಾದಕತೆ ಹೀಗೆ ಹಲವಾರು ಕಾರಣಗಳಿಗಾಗಿ ಕಂಪನಿಯ ಸುಮಾರು ಶೇ. 15 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದಾಗಿ ಸಿಇಒ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...