ಊಟವಾದ ಮೇಲೆ ಅಡಿಕೆ ಜೊತೆ ವೀಳ್ಯದೆಲೆ ಸೇವಿಸುವ ಪದ್ಧತಿ ಅನೇಕ ವರ್ಷಗಳಿಂದಲೂ ರೂಢಿಯಲ್ಲಿದೆ. ತಾಂಬೂಲ ತಿನ್ನುವುದ್ರಿಂದ ಸಾಕಷ್ಟು ಲಾಭವಿದೆ.
ಬಾಯಿ ರುಚಿ ಹೆಚ್ಚಿಸುವ ಜೊತೆಗೆ ಅನೇಕ ರೋಗಗಳನ್ನು ಹೊಡೆದೋಡಿಸುವ ಶಕ್ತಿಯನ್ನು ವೀಳ್ಯದೆಲೆ ಹೊಂದಿದೆ.
ವೀಳ್ಯದೆಲೆಯನ್ನು ನೀರಿನಲ್ಲಿ ಕುದಿಸಿ ಆ ನೀರು ಕುಡಿಯುವುದ್ರಿಂದ ಕಫ, ಕೆಮ್ಮು ಕಡಿಮೆಯಾಗುತ್ತದೆ. ಮಕ್ಕಳಿಗೆ ಇದ್ರ ಜೊತೆ ತುಳಸಿ ರಸ ಹಾಗೂ ಸ್ವಲ್ಪ ಜೇನು ತುಪ್ಪವನ್ನು ಬೆರೆಸಿ ಕೊಡಬಹುದು.
ಎಲೆ, ನಂಜು ನಿರೋಧಕ. ಸಣ್ಣಪುಟ್ಟ ಗಾಯಗಳಿಗೆ ಎಲೆ ರಸವನ್ನು ತೆಗೆದು ಹಚ್ಚುವುದ್ರಿಂದ ಗಾಯ ಬಹುಬೇಗ ಗುಣವಾಗುತ್ತದೆ. ಗಂಟಲು ಸಮಸ್ಯೆ ಎದುರಾದಾಗ ಪಾನ್ ತಿನ್ನುವುದು ಅಥವಾ ಎಲೆಯನ್ನು ನೀರಿನಲ್ಲಿ ಕುದಿಸಿ ಕುಡಿಯುವುದ್ರಿಂದ ಗಂಟಲು ನೋವಿನ ಸಮಸ್ಯೆ ಕಡಿಮೆಯಾಗುತ್ತದೆ.
ದಂತದಿಂದ ರಕ್ತ ಬರ್ತಿದ್ದರೆ ಇದನ್ನು ತಡೆಯುವ ಶಕ್ತಿ ಎಲೆಗಿದೆ. ಎಲೆಯನ್ನು ನೀರಿನಲ್ಲಿ ಕುದಿಸಿ ಆ ನೀರಿನಿಂದ ಬಾಯಿ ಮುಕ್ಕಳಿಸಿದ್ರೆ ಪ್ರಯೋಜನಕಾರಿ.
ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ಕೆಲಸವನ್ನು ವೀಳ್ಯದೆಲೆ ಮಾಡುತ್ತದೆ. ಜೊತೆಗೆ ಉತ್ತಮ ಜೀರ್ಣಕ್ರಿಯೆಗೆ ಇದು ಸಹಕಾರಿ. ತಲೆನೋವನ್ನು ಗುಣಪಡಿಸುವ ಶಕ್ತಿ ಕೂಡ ವೀಳ್ಯದೆಲೆಗಿದೆ.