ವೀಳ್ಯದೆಲೆಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ. ಯಾವುದೇ ಶುಭ ಸಮಾರಂಭಗಳಿರಲಿ, ಹಬ್ಬ ಹರಿದಿನಗಳಿರಲಿ, ಮನೆಗೆ ಬಂದವರಿಗೆ ಉಡುಗೊರೆ ಕೊಡಲು ವೀಳ್ಯದ ಎಲೆ ಬೇಕೇ ಬೇಕು.
ಜೊತೆಗೆ ಮದುವೆ, ಹಬ್ಬಗಳಲ್ಲಿ ಭೂರಿ ಭೋಜನದ ನಂತರ ಎಲೆ ಅಡಿಕೆ ಇಲ್ಲ ಅಂದ್ರೆ ಹೇಗೆ ಹೇಳಿ. ಊಟದ ನಂತರ ತಾಂಬೂಲ ಹಾಕಿಕೊಂಡ್ರೇನೆ ಊಟ ಪರಿಪೂರ್ಣವಾಗುವುದು. ಶುಭದ ಸಂಕೇತವಾಗಿರುವ ಈ ವೀಳ್ಯದ ಎಲೆ ಮನುಷ್ಯನ ದೇಹದ ಜೀರ್ಣಕ್ರಿಯೆಗೆ ಉತ್ತಮ ಔಷಧಿಯಾಗಿದೆ.
ಇನ್ನು ವೀಳ್ಯದ ಎಲೆ ಬಾಡಿ ಹೋಗಿದೆ ಅಂತಾ ಎಷ್ಟೋ ಮಂದಿ ಬಿಸಾಡುತ್ತಾರೆ. ಆದ್ರೆ ಇನ್ಮುಂದೆ ಹಾಗೆ ಮಾಡಬೇಡಿ. ಹೌದು, ಒಣಗಿ ಹೋದ ಎಲೆಯನ್ನು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಗರಿಗರಿಯಾಗಿ ಹುರಿದು ನಂತರ ಅದಕ್ಕೆ ಸ್ವಲ್ಪ ಅಡಿಕೆ ತುಂಡುಗಳು, ಎರಡು ಏಲಕ್ಕಿ, ಒಂದೆರಡು ಲವಂಗ, ಚಿಟಿಕೆ ಸುಣ್ಣ , 1 ಚಮಚ ಸಕ್ಕರೆ ಹಾಕಿ ನುಣ್ಣಗೆ ಮಿಕ್ಸಿ ಮಾಡಿ.
ಹೀಗೆ ಪುಡಿ ಮಾಡಿಟ್ಟುಕೊಂಡ ಅಡಿಕೆ-ಎಲೆ ಪುಡಿಯನ್ನು ಪ್ರತಿದಿನ ಊಟದ ನಂತರ ತಿಂದ್ರೆ ಜೀರ್ಣಕ್ರಿಯೆ ಉತ್ತಮವಾಗುತ್ತೆ. ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.