ಎಲೆ ಅಡಿಕೆಯ ಪಾನ್ ಬಾಯಿಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ವೀಳ್ಯದೆಲೆಗಳನ್ನು ಪೂಜೆ ಕಾರ್ಯಗಳಿಗೆ ಮಾತ್ರವಲ್ಲ ಔಷಧಿಯಾಗಿ ಬಳಕೆ ಮಾಡಲಾಗುತ್ತದೆ. ಭಾರತದಲ್ಲಿ ವೀಳ್ಯದೆಲೆ ಹಾಗೂ ಪಾನ್ ಗೆ ಮಹತ್ವದ ಸ್ಥಾನವಿದೆ. ಮದುವೆ ಮನೆಗಳಲ್ಲಿ ಎಲೆ-ಅಡಿಕೆಯನ್ನು ಶುಭ ಕೆಲಸಗಳಿಗೆ ಮಾತ್ರವಲ್ಲ ಊಟದ ನಂತ್ರ ಪಾನ್ ರೂಪದಲ್ಲಿ ನೀಡುತ್ತಾರೆ.
ಪಾನ್ ನಿಂದ ಸಾಕಷ್ಟು ಪ್ರಯೋಜನವಿದೆ. ಮಧುಮೇಹ ವಿರೋಧಿ, ಉರಿಯೂತ, ಸೋಂಕು ನಿರೋಧಕ ಗುಣಗಳನ್ನು ಎಲೆ ಹೊಂದಿವೆ. ವೀಳ್ಯದೆಲೆ ಸೇವನೆಯಿಂದ ಟೆಸ್ಟೋಸ್ಟೆರಾನ್ ಹಾರ್ಮೋನ್ ಮಟ್ಟವೂ ಹೆಚ್ಚಾಗುತ್ತದೆ. ರಾತ್ರಿ ಊಟದ ನಂತ್ರ ಪಾನ್ ಸೇವನೆ ಮಾಡುವುದ್ರಿಂದ ಪುರುಷರಲ್ಲಿ ಕಾಮಾಸಕ್ತಿ ಹೆಚ್ಚಾಗುತ್ತದೆ. ಇದು ಪುರುಷರಲ್ಲಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಊಟದ ನಂತ್ರ ಪಾನ್ ಸೇವನೆ ಮಾಡಿದಲ್ಲಿ ಜೀರ್ಣಕ್ರಿಯೆ ಸರಿಯಾಗುತ್ತದೆ. ಊಟದ ನಂತ್ರ ಎಲೆ-ಅಡಿಕೆ ತಿಂದಲ್ಲಿ ಹೊಟ್ಟೆ ಉರಿ, ಅನಿಲ, ಹೊಟ್ಟೆ ನೋವು, ಎದೆ ಉರಿ ಸಮಸ್ಯೆ ಕಡಿಮೆಯಾಗುತ್ತದೆ. ವೀಳ್ಯದೆಲೆ ಮಲಬದ್ಧತೆಯನ್ನೂ ಕಡಿಮೆ ಮಾಡುತ್ತದೆ. ರಾತ್ರಿ ಒಂದು ಲೋಟ ನೀರಿಗೆ ವೀಳ್ಯದೆಲೆ ಹಾಕಿ ಕುದಿಸಿ ಅದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದ್ರೆ ಪ್ರಯೋಜನ ಕಾಣಬಹುದು.