
ಉಡುಪಿ: ಹಿಜಾಬ್ ವಿವಾದದ ಪರಿಣಮದಿಂದಾಗಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದ ಪ್ರಾಂಶುಪಾಲರಿಗೆ ಪ್ರಶಸ್ತಿ ತಡೆ ಹಿಡಿದಿರುವ ಘಟನೆ ನಡೆದಿದೆ.
ಇಂದು ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಕುಂದಾಪುರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಬೇಕಾಗಿತ್ತು. ಆದರೆ ಎರಡು ವರ್ಷಗಳ ಹಿಂದೆ ನಡೆದಿದ್ದ ಹಿಜಾಬ್ ವಿವಾದದ ಪರಿಣಾಮ ಇದೀಗ ಕೊನೇ ಕ್ಷಣದಲ್ಲಿ ರಾಜ್ಯ ಸರ್ಕಾರ ರಾಮಕೃಷ್ಣ ಬಿ.ಜಿ ಅವರಿಗೆ ಪ್ರಶಸ್ತಿ ತಡೆ ಹಿಡಿದಿದೆ.
ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯನ್ನು ಪ್ರಾಂಶುಪಾಲರು ಅಂದು ಕಾಲೇಜಿನ ಗೇತ್ ಬಳಿ ನಿಲ್ಲಿಸಿದ್ದರು. ಈ ಫೋಟೋ ಕೂಡ ವೈರಲ್ ಆಗಿತ್ತು. ಈ ಘಟನೆ ನಡೆದಾಗ್ಯೂ ಕೂಡ ಕಳೆದ ಬಿಜೆಪಿ ಸರ್ಕಾರ ಪ್ರಾಂಶುಪಾಲರನ್ನು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಇದು ತೀವ್ರ ಆಕ್ರೋಶಕ್ಕೆ ವ್ಯಕ್ತವಾಗಿತ್ತು. ಇದೀಗ ಪ್ರಾಂಶುಪಾಲರ ಪ್ರಶಸ್ತಿ ಹಿಂಪಡೆಯುವಂತೆ ಒತ್ತಡ ಹೆಚ್ಚುತ್ತಿದ್ದಂತೆ ರಾಜ್ಯ ಸರ್ಕಾರ ಪ್ರಶಸ್ತಿ ತಡೆ ಹಿಡಿದಿದೆ.