alex Certify ಮಾನಸಿಕ ಆಘಾತಕ್ಕೆ ಸಿಲುಕಿದ ರೋಗಿಗಳಿಗೆ ಬ್ರಿಟನ್ ವೈದ್ಯರಿಂದ ಹಾಸ್ಯ ಥೆರಪಿ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನಸಿಕ ಆಘಾತಕ್ಕೆ ಸಿಲುಕಿದ ರೋಗಿಗಳಿಗೆ ಬ್ರಿಟನ್ ವೈದ್ಯರಿಂದ ಹಾಸ್ಯ ಥೆರಪಿ ಸೂಚನೆ

ಆಘಾತಕ್ಕೀಡಾದ ರೋಗಿಗಳಿಗೆ ಸಾಮಾನ್ಯವಾಗಿ ಕೌನ್ಸೆಲಿಂಗ್, ಧ್ಯಾನ ಸೇರಿದಂತೆ ಒಂದಷ್ಟು ಮಾನಸಿಕ ಚಿಕಿತ್ಸೆಗಳನ್ನು ಕೊಡುವುದನ್ನು ಕೇಳಿದ್ದೇವೆ. ಇದೀಗ ಇಂಥ ಆಘಾತಗಳಿಂದ ಹೊರ ಬರಲು ಕಾಮಿಡಿ ಕೋರ್ಸ್ ಒಂದರಲ್ಲಿ ಭಾಗಿಯಾಗಲು ಬ್ರಿಟನ್‌ನಲ್ಲಿ ಸೂಚಿಸಲಾಗುತ್ತಿದೆ.

’ದಿ ಗಾರ್ಡಿಯನ್’ ದೈನಿಕದ ವರದಿಯಂತೆ, ಬ್ರಿಸ್ಟಾಲ್ ವಿವಿಯಲ್ಲಿ ಕಾಮೆಡಿಯನ್ ಆಗಿರುವ ಆಂಗಿ ಬೆಲ್ಚರ್‌‌ ಮಾನಸಿಕ ಆಘಾತಕ್ಕೆ ಸಿಲುಕಿರುವ ಮಂದಿಗೆ ಚೇತರಿಸಿಕೊಳ್ಳಲೆಂದು ವಿಶೇಷವಾದ ಕಾಮೆಡಿ ಸೆಶನ್‌ಗಳನ್ನು ಅಭಿವೃದ್ಧಿಪಡಿಸಲು ಮಾನವಶಾಸ್ತ್ರಜ್ಞರು ಮತ್ತು ಆರೋಗ್ಯ ಸಲಹೆಗಾರರೊಂದಿಗೆ ಕೆಲಸ ಮಾಡುತ್ತಿದ್ದಾರೆ.

ಪೋಷಕರೇ ಗಮನಿಸಿ: ಪಲ್ಸ್ ಪೋಲಿಯೋ ಅಭಿಯಾನ ಮುಂದೂಡಿಕೆ

ವಿನೋದವನ್ನು ಆಘಾತಕ್ಕೆ ಔಷಧದ ರೂಪದಲ್ಲಿ ಬಳಸುವುದು ಇದೇ ಮೊದಲೇನಲ್ಲ ಎಂದು ತಿಳಿಸುವ ಗಾರ್ಡಿಯನ್, ಈ ಹಿಂದೆ ರಸೆಲ್ ಬ್ರಾಂಡ್ ಮತ್ತು ಜಿಮ್ಮಿ ಕಾರ್‌‌ರಂಥ ಕಾಮೆಡಿಯನ್‌ಗಳು ಮಾನಸಿಕ ಆರೋಗ್ಯದ ಸಂಬಂಧ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ ಎಂದು ತಿಳಿಸಿದೆ.

ಟೆಡ್‌ ಟಾಕ್‌ನಲ್ಲಿ ಭಾಗಿಯಾಗಿ ಮಾತನಾಡಿರುವ ರೂಬಿ ವಾಕ್ಸ್‌, ಖುದ್ದು ತಮ್ಮದೇ ಮಾನಸಿಕ ಅನಾರೋಗ್ಯದ ವಿರುದ್ಧ ಹೋರಾಡಿದ್ದು, ಮಾನಸಿಕ ಆರೋಗ್ಯ ಸಂಸ್ಥೆಯೊಂದರಿಂದ ಮರಳಿದ ಬಳಿಕ ಮನಶಾಸ್ತ್ರದಲ್ಲಿ ಅಧ್ಯಯನ ನಡೆಸಿ, ಆಕ್ಸ್‌ಫರ್ಡ್ ವಿವಿಯಲ್ಲಿ ಇದೇ ಸಂಬಂಧ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದು, ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ನೀಡಿದ ಸೇವೆಗಾಗಿ ಪ್ರತಿಷ್ಢಿತ ಓಬಿಎ ಗೌರವಕ್ಕೂ ಭಾಜನರಾಗಿದ್ದಾರೆ.

ಮನೋರೋಗಗಳಿಂದ ಹೊರಬರಲು ಕಲೆ ಮತ್ತು ಮನಃಶಾಸ್ತ್ರಗಳ ಸಮ್ಮಿಲನ ಮಾಡುವುದು ಹೇಗೆಂದು ಖುದ್ದಾಗಿ ತಿಳಿಸಿರುವ ರೂಬಿ ವಾಕ್ಸ್‌ರ ಮಾತುಗಳನ್ನು ಈ ಲಿಂಕ್‌ನಲ್ಲಿ ಕೇಳಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...