ಇಂದು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನ. ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 11 ರಂದು ಆಚರಿಸಲಾಗುತ್ತದೆ. ಹೆಣ್ಣು ಮಗುವಿನ ಶಿಕ್ಷಣ, ಸುರಕ್ಷತೆ ಮತ್ತು ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಹೆಣ್ಣು ಮಗುವಿಗೆ ಆರ್ಥಿಕ ಶಕ್ತಿ ನೀಡುವುದು ಬಹಳ ಮುಖ್ಯ.
ಹೆಣ್ಣು ಮಕ್ಕಳನ್ನು ಆರ್ಥಿಕವಾಗಿ ಸದೃಢಗೊಳಿಸಲು ಸರ್ಕಾರ ಅನೇಕ ಯೋಜನೆಗಳನ್ನು ತಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿದಂತೆ ಅನೇಕ ಬ್ಯಾಂಕುಗಳು ಹೆಣ್ಣು ಮಕ್ಕಳಿಗಾಗಿ ಅನೇಕ ಯೋಜನೆಗಳನ್ನು ನಡೆಸುತ್ತಿವೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಹೆಣ್ಣು ಮಕ್ಕಳ ಉತ್ತಮ ಭವಿಷ್ಯಕ್ಕೆ ಬುನಾದಿ ಹಾಕಬಹುದು.
ಮಗಳ ಭವಿಷ್ಯಕ್ಕೆ ಹೂಡಿಕೆ ಮಾಡಲು ಬಯಸಿದ್ದರೆ ಮೊದಲು ಹೂಡಿಕೆ ಯೋಜನೆಯ ಬಗ್ಗೆ ಸರಿಯಾಗಿ ತಿಳಿಯಬೇಕು. ಎಲ್ಲಕ್ಕಿಂತ ಮೊದಲು ನೀವು ಎಷ್ಟು ಹೂಡಿಕೆ ಮಾಡುತ್ತೀರಿ ಎಂಬುದನ್ನು ನಿರ್ಧರಿಸಬೇಕು.
Good News: 40 ಸಾವಿರಕ್ಕೂ ಅಧಿಕ ಉದ್ಯೋಗಿಗಳ ನೇಮಕಾತಿಗೆ ಮುಂದಾದ ಟಿಸಿಎಸ್
ಸುಕನ್ಯಾ ಸಮೃದ್ಧಿ ಯೋಜನೆ : ಸುಕನ್ಯಾ ಸಮೃದ್ಧಿ ಯೋಜನೆ ಒಂದು ಸಣ್ಣ ಉಳಿತಾಯ ಯೋಜನೆ. ಕೇಂದ್ರ ಸರ್ಕಾರ ಇದನ್ನು ‘ಬೇಟಿ ಬಚಾವೋ ಬೇಟಿ ಪಡಾವೋ’ ಅಭಿಯಾನದ ಅಡಿಯಲ್ಲಿ ಆರಂಭಿಸಿದೆ. ಈ ಯೋಜನೆಯಡಿ ಪೋಷಕರು, ಹೆಣ್ಣು ಮಗುವಿನ ಹೆಸರಿನಲ್ಲಿ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಖಾತೆ ತೆರೆಯಬಹುದು. ಖಾತೆ ತೆರೆಯಲು ಹೆಣ್ಣು ಮಗುವಿನ ವಯಸ್ಸಿನ ಮಿತಿ 10 ವರ್ಷಕ್ಕಿಂತ ಕಡಿಮೆ ಇರಬೇಕು. ಇಬ್ಬರು ಹುಡುಗಿಯರ ಹೆಸರಿನಲ್ಲಿ ಮಾತ್ರ ಪ್ರತ್ಯೇಕ ಖಾತೆಗಳನ್ನು ತೆರೆಯಬಹುದು.
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಖಾತೆಯ ಮುಕ್ತಾಯ ಮಿತಿಯನ್ನು 15 ವರ್ಷಗಳಿಗೆ ನಿಗದಿಪಡಿಸಲಾಗಿದೆ. ಪ್ರತಿ ವರ್ಷ ಈ ಖಾತೆಯಲ್ಲಿ ಕನಿಷ್ಠ 250 ರೂಪಾಯಿ ಹಾಗೂ ಗರಿಷ್ಠ 1,50,000 ರೂಪಾಯಿ ಹೂಡಿಕೆ ಮಾಡಬಹುದು. ಮಗಳಿಗೆ 21 ವರ್ಷ ತುಂಬಿದ ನಂತ್ರ ನೀವು ಖಾತೆ ಮುಚ್ಚಬಹುದು. ತುರ್ತು ಪರಿಸ್ಥಿತಿಯಲ್ಲಿ ಶೇಕಡಾ 50ರಷ್ಟು ಹಣವನ್ನು ತೆಗೆಯಬಹುದು. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಪ್ರಸ್ತುತ ಬಡ್ಡಿದರ ಶೇಕಡಾ 7.6 ರಷ್ಟಿದೆ.
ಸ್ಯಾನಿಟರಿ ಪ್ಯಾಡ್ ಒಳಗೆ ಡ್ರಗ್ಸ್ ಹೊತ್ತೊಯ್ದಿದ್ದ ಯುವತಿ…!
ಎಲ್ಐಸಿ ಕನ್ಯಾದಾನ್ ಯೋಜನೆ : ಹೆಸರು ಸೂಚಿಸುವಂತೆ, ಈ ಯೋಜನೆಯನ್ನು ಮಗಳ ಮದುವೆಗಾಗಿ ಮಾಡಲಾಗಿದೆ. ಮಗಳ ಜನನದ ನಂತರ, ಅವಳ ಮದುವೆ ಆಲೋಚನೆ ಎಲ್ಲರಿಗೂ ಇರುತ್ತದೆ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಮದುವೆಗೆ ಹಣ ಸಂಗ್ರಹಿಸಬಹುದು.
ಭಾರತೀಯ ಜೀವ ವಿಮಾ ನಿಗಮವು ಮಗಳ ಮದುವೆಗೆ ಈ ಯೋಜನೆಯಡಿ ಆರ್ಥಿಕ ನೆರವು ನೀಡ್ತಿದೆ. ಈ ಪಾಲಿಸಿಯನ್ನು ತೆಗೆದುಕೊಂಡ ನಂತರ ಮಗಳ ಮದುವೆ ಚಿಂತೆಯಿಂದ ಮುಕ್ತರಾಗಬಹುದು. ಎಲ್ಐಸಿ ಕನ್ಯಾದಾನ್ ಪಾಲಿಸಿಯಲ್ಲಿ, ಪ್ರತಿ ತಿಂಗಳು ಸುಮಾರು 3600 ರೂಪಾಯಿಗಳ ಪ್ರೀಮಿಯಂ ಜಮಾ ಮಾಡಬೇಕಾಗುತ್ತದೆ. ಪ್ರತಿದಿನ 121 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ, 25 ವರ್ಷಗಳ ನಂತರ ಈ ಪಾಲಿಸಿಯಿಂದ ಸುಮಾರು 25 ಲಕ್ಷ ರೂಪಾಯಿ ಪಡೆಯಬಹುದು.
ಈ ಪಾಲಿಸಿಯ ವಿಶೇಷವೆಂದರೆ ಪಾಲಿಸಿಯನ್ನು ಆರಂಭಿಸಿದ ನಂತ್ರ ಮಗಳು ಅಪಘಾತದಲ್ಲಿ ಸತ್ತರೆ, ಆ ಕುಟುಂಬವು ಒಟ್ಟು 10 ಲಕ್ಷ ರೂಪಾಯಿ ಪರಿಹಾರ ಪಡೆಯುತ್ತದೆ. ಸಾಮಾನ್ಯ ಸಾವಿನ ಸಂದರ್ಭದಲ್ಲಿ 5 ಲಕ್ಷ ರೂಪಾಯಿ ಸಿಗುತ್ತದೆ. ಪಾಲಿಸಿಯ ಮುಕ್ತಾಯದವರೆಗೆ ಕುಟುಂಬವು ಪ್ರತಿ ವರ್ಷ 50,000 ರೂಪಾಯಿ ಜಮಾ ಮಾಡಿದ್ರೆ 25 ವರ್ಷಗಳ ನಂತರ, ಸಂಪೂರ್ಣ ವಿಮಾ ಮೊತ್ತವನ್ನು ನಾಮಿನಿಗೆ ನೀಡಲಾಗುತ್ತದೆ. ಈ ಪಾಲಿಸಿಯು 25 ವರ್ಷಗಳವರೆಗೆ ಇರುತ್ತದೆ. ಆದರೆ ಪ್ರೀಮಿಯಂ 22 ವರ್ಷಗಳವರೆಗೆ ವತಿಸಬೇಕಾಗುತ್ತದೆ.
ಅಕ್ಟೋಬರ್ 16ರಂದು ‘ರೈಡರ್’ ಚಿತ್ರದ ಮೊದಲ ಹಾಡು ರಿಲೀಸ್
ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಹೂಡಿಕೆ : ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡುವ ಮೂಲಕ ಮಗಳಿಗೆ ಉತ್ತಮ ಭವಿಷ್ಯ ನೀಡಬಹುದು.ಮಗಳ ಹುಟ್ಟಿದ ನಂತ್ರ ಪಿಪಿಎಫ್ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, 15 ವರ್ಷಗಳಲ್ಲಿ ಹಣ ನಿಮ್ಮ ಕೈಸೇರುತ್ತದೆ. ಒಂದು ವರ್ಷದಲ್ಲಿ 500 ರೂಪಾಯಿಯಿಂದ 1,50,000 ರೂಪಾಯಿವರೆಗೆ ಈ ಯೋಜನೆಯಲ್ಲಿ ಠೇವಣಿ ಮಾಡಬಹುದು.
ಹೆಣ್ಣು ಮಕ್ಕಳಿಗೆ ಆರ್ಥಿಕ ಭದ್ರತೆ ನೀಡಬಯಸುವವರು ಇಂದೇ ಈ ಯೋಜನೆಯಲ್ಲಿ ಹೂಡಿಕೆ ಶುರು ಮಾಡಿ.