ಎಣ್ಣೆಯುಕ್ತ ಚರ್ಮ ಹೊಂದಿರುವವರಿಗೆ ಯಾವುದೇ ರೀತಿಯ ಕ್ರೀಮ್ ಬಳಸಿದರೂ ಅದರಿಂದಾಗುವ ಕಿರಿಕಿರಿ ಮಾತ್ರ ತಪ್ಪಿದ್ದಲ್ಲ. ಎಣ್ಣೆಯುಕ್ತ ಚರ್ಮದವರಿಗೆ ಮೊಡವೆಗಳು ಬೆಂಬಿಡದಂತೆ ಕಾಡುತ್ತವೆ. ಆದರೆ ನೈಸರ್ಗಿಕವಾಗಿ ದೊರೆಯುವ ಮನೆಮದ್ದುಗಳನ್ನು ಅನುಸರಿಸಿದರೆ ಅದರಿಂದ ಪರಿಹಾರವನ್ನು ಪಡೆದುಕೊಳ್ಳಬಹುದು.
ಆಲೊವೆರಾ : ಪ್ರತಿ ದಿನ ರಾತ್ರಿ ಆಲೂವೆರಾ ಜೆಲ್ ಅನ್ನು ಮುಖಕ್ಕೆ ಹಚ್ಚಿ ಬೆಳಿಗ್ಗೆ ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳುವುದರಿಂದ ತ್ವಚೆಯಲ್ಲಿನ ಜಿಡ್ಡಿನ ಅಂಶವನ್ನು ಹೀರಿಕೊಂಡು ತ್ವಚೆಗೆ ಹೊಳಪನ್ನು ನೀಡುತ್ತದೆ.
ಟೊಮ್ಯಾಟೊ : ಚೆನ್ನಾಗಿ ಹಣ್ಣಾದ ಟೊಮ್ಯಾಟೊದ ರಸ ತೆಗೆದು ಮುಖಕ್ಕೆ ಲೇಪಿಸುವುದರಿಂದ ಜಿಡ್ಡಿನಂಶವನ್ನು ಹೀರಿಕೊಂಡು, ತ್ವಚೆಯ ಮೇಲಾಗುವ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.
ನಿಂಬೆ ಹಣ್ಣಿನ ರಸ : ಇದರಲ್ಲಿ ಸಿಟ್ರಿಕ್ ಆ್ಯಸಿಡ್ ಹೇರಳವಾಗಿರುವುದರಿಂದ ತ್ವಚೆಯ ಆಳಕ್ಕಿಳಿದು, ಡೆಡ್ ಸೆಲ್ ಗಳನ್ನು ಹೊರಹಾಕಿ, ತ್ವಚೆಗೆ ಹೊಸ ಮೆರುಗನ್ನು ನೀಡುತ್ತದೆ.