alex Certify ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್‌ಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ರಸ್ತೆಗಳಲ್ಲಿ ಎಲೆಕ್ಟ್ರಿಕ್ ಬಸ್‌, ಕಾರು ಮತ್ತು ಸ್ಕೂಟರ್‌ಗಳೇ ಕಾಣಿಸುತ್ತವೆ. ಬಜಾಜ್, ಹೀರೋ, ಟಿವಿಎಸ್‌ನಂತಹ ಹಳೆಯ ಕಂಪನಿಗಳಿಂದ ಹಿಡಿದು ಹೊಸ ಕಂಪನಿಗಳಾದ ಎಥರ್, ಓಲಾ ಮತ್ತು ರಿವೋಲ್ಟ್‌ಗಳಂತಹ ಅನೇಕ ಕಂಪನಿಗಳ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಭಾರತದಲ್ಲಿ ಲಭ್ಯವಿವೆ.

ಪ್ರತಿದಿನ 30 ರಿಂದ 50 ಕಿಲೋಮೀಟರ್ ಪ್ರಯಾಣಿಸಲು ಸ್ಕೂಟರ್ ಅಥವಾ ಬೈಕ್‌ ಬಳಸುತ್ತಿದ್ದರೆ ಅಂಥವರಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ  ಉತ್ತಮ ಆಯ್ಕೆಯಾಗಿದೆ.  ಏಕೆಂದರೆ ಪೆಟ್ರೋಲ್ ಬೈಕ್ ಅಥವಾ ಸ್ಕೂಟರ್‌ಗಿಂತ ಇವು ಅಗ್ಗ. ಪೆಟ್ರೋಲ್ ಗಿಂತ ವಿದ್ಯುತ್ ಬೆಲೆ ಅಗ್ಗವಾಗಿದ್ದು, ಅವುಗಳ ನಿರ್ವಹಣೆ ವೆಚ್ಚವೂ ಕಡಿಮೆ. ಭಾರತದಲ್ಲಿ ಲಭ್ಯವಿರುವ ಟಾಪ್‌ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಯಾವುವು ಅನ್ನೋದನ್ನು ನೋಡೋಣ.

ಎಥರ್ 450x

ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಪಟ್ಟಿಯಲ್ಲಿ Ather 450X Gen 3 ಅಗ್ರಸ್ಥಾನದಲ್ಲಿದೆ. ಈ ಹಿಂದೆ Ather 450X Gen 2 ಲಭ್ಯವಿತ್ತು. ಹಳೆಯ ಮಾಡೆಲ್‌ಗೆ ಹೋಲಿಸಿದರೆ ಈ ಸ್ಕೂಟರ್‌ನಲ್ಲಿ ಉತ್ತಮ ಸ್ಪೆಕ್ಸ್ ಲಭ್ಯವಿದೆ. ಇದು ಒಮ್ಮೆ ಚಾರ್ಜ್‌ ಮಾಡಿದ್ರೆ 146 ಕಿಮೀ ಓಡಬಲ್ಲದು. ವಾರ್ಪ್, ಸ್ಪೋರ್ಟ್, ರೈಡ್, ಸ್ಮಾರ್ಟ್ ಮತ್ತು ಇಕೋ ಎಂಬ 4 ಮೋಡ್‌ಗಳನ್ನು ಇದು ಹೊಂದಿದೆ.

Ather 450X Gen 3 ನಲ್ಲಿ 3.74 kWh ಬ್ಯಾಟರಿ ಇದೆ. ಇದನ್ನು ಪೂರ್ತಿ ಚಾರ್ಜ್ ಮಾಡಲು 5 ಗಂಟೆ 40 ನಿಮಿಷ ಬೇಕು. ಇದು 6kW PMS (ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್) ಮೋಟಾರ್ ಹೊಂದಿದೆ. ಮುಂಭಾಗದಲ್ಲಿ 7 ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ ಅಳವಡಿಸಲಾಗಿದೆ. ಈ ಸ್ಕೂಟರ್‌ನ ಬೆಲೆ 1,65,435 ರೂಪಾಯಿ.

Ola S1 Pro

ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ಕೂಡ ಬಹಳ ಜನಪ್ರಿಯವಾಗಿವೆ. Ola S1 Pro ಕಳೆದ ವರ್ಷ ಭಾರತದಲ್ಲಿ ಬಿಡುಗಡೆಯಾಯಿತು. Ola S1 Pro ಅನ್ನು ಒಮ್ಮೆ ಪೂರ್ತಿಯಾಗಿ ಚಾರ್ಜ್‌ ಮಾಡಿದ್ರೆ 181 ಕಿಲೋಮೀಟರ್‌ಗಳವರೆಗೆ ಓಡಿಸಬಹುದು. ಇದರ ಗರಿಷ್ಠ ವೇಗ ಗಂಟೆಗೆ 115 ಕಿಮೀ. ಇದರಲ್ಲಿ 7 ಇಂಚಿನ LCD ಡಿಸ್‌ಪ್ಲೇ ಇದೆ, ಕೀಲಿ ರಹಿತ ಪ್ರವೇಶವೂ ಇದೆ. Ola S1 Pro ಬೆಲೆ 1,29,999 ರೂಪಾಯಿ.

ಬಜಾಜ್ ಚೇತಕ್

ಬಜಾಜ್ ಕಂಪನಿ 90ರ ದಶಕದಿಂದಲೂ ಚೇತಕ್ ಅನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ. ಆದರೆ ಈಗ ಬಜಾಜ್ ಚೇತಕ್‌ ಎಲೆಕ್ಟ್ರಿಕ್ ಅವತಾರದಲ್ಲಿ ಬಂದಿದೆ. ಇದರ ಲುಕ್‌ ಹಳೆಯ ಬಜಾಜ್ ಚೇತಕ್‌ನಂತೆಯೇ ಇದೆ. ಉಕ್ಕಿನ ಬಾಡಿ ಹೊಂದಿರೋ ಈ ಸ್ಕೂಟರ್‌ 4kW ಎಲೆಕ್ಟ್ರಿಕ್ ಮೋಟಾರ್ ಅನ್ನು ಹೊಂದಿದೆ. ಇದು 16Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 78 ಕಿಮೀ.

ಈ ಸ್ಕೂಟರ್ ಒಂದೇ ಚಾರ್ಜಿಂಗ್‌ನಲ್ಲಿ 95 ಕಿಮೀ ಓಡಬಲ್ಲದು. ಇದರ 3KWh ಬ್ಯಾಟರಿ ಚಾರ್ಜ್ ಮಾಡಲು 5 ಗಂಟೆ ಬೇಕು. ಈ ಸ್ಕೂಟರ್‌ನ ವಿಶೇಷತೆಯೆಂದರೆ ಇದು IP 67 ರೇಟಿಂಗ್‌ನೊಂದಿಗೆ ಬರುತ್ತದೆ.  ಚೇತಕ್ ಅರ್ಬೇನ್ ಬೆಲೆ 1,17,175 ರೂಪಾಯಿ ಆದರೆ, ಇದರ ಪ್ರೀಮಿಯಂ ಬೆಲೆ 1,40,359 ರೂಪಾಯಿ ಇದೆ.

TVS iQube ST

ಟಿವಿಎಸ್ ಭಾರತದ ಅತ್ಯುತ್ತಮ ದ್ವಿಚಕ್ರ ವಾಹನ ಕಂಪನಿಗಳಲ್ಲಿ ಒಂದಾಗಿದೆ. ಕಂಪನಿಯ ಎಲೆಕ್ಟ್ರಿಕ್‌ ಶ್ರೇಣಿಯ ಹೊಸ ಸ್ಕೂಟರ್‌ಗಳಲ್ಲಿ ಟಿವಿಎಸ್ ಐಕ್ಯೂಬ್ ಎಸ್‌ಟಿ ಕೂಡ ಒಂದು. ಈ ಸ್ಕೂಟರ್ ನಲ್ಲಿ ಸಾಕಷ್ಟು ಬೂಟ್ ಸ್ಪೇಸ್ ಇದೆ. 7 ಇಂಚಿನ ಟಚ್ ಡಿಸ್‌ಪ್ಲೇ ಜೊತೆಗೆ ಅಮೆಜಾನ್ ಅಲೆಕ್ಸಾ ಸಪೋರ್ಟ್‌ ಪಡೆಯಬಹುದು. ಒಮ್ಮೆ ಚಾರ್ಜ್‌ ಮಾಡಿದ್ರೆ 150 ಕಿಮೀ ಓಡಬಲ್ಲ ಈ ಸ್ಕೂಟರ್‌ನ ಆರಂಭಿಕ ಬೆಲೆ 1,65,555 ರೂಪಾಯಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...