ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಬಾಳೆ ಹಣ್ಣನ್ನು ಇಷ್ಟಪಡ್ತಾರೆ. ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣದ ಅಂಶ ಇದ್ರಲ್ಲಿ ಹೆಚ್ಚಿರುವ ಕಾರಣ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಬಾಳೆ ಹಣ್ಣನ್ನು ಹೇಗೆ ತಿನ್ನೋದು ಎಂಬುದು ಎಲ್ಲರಿಗೂ ಗೊತ್ತು.
ಆದ್ರೆ ಬಾಳೆಹಣ್ಣು ಸುಂದರ ಹಾಗೂ ಆರೋಗ್ಯಕರ ಕೂದಲಿಗೂ ಬೆಸ್ಟ್ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಸುಂದರ ಹಾಗೂ ಆರೋಗ್ಯಕರ ಕೂದಲಿಗೆ ಬಾಳೆಹಣ್ಣಿನ ಪ್ಯಾಕ್ ಬೆಸ್ಟ್.
ಧೂಳು ಹಾಗೂ ಮಾಲಿನ್ಯದಿಂದಾಗಿ ಕೂದಲು ಆಯ್ಲಿಯಾಗುತ್ತದೆ. ಇದ್ರಿಂದ ಹೊಟ್ಟಿನ ಸಮಸ್ಯೆ ಕಾಡುತ್ತದೆ. ಹೊಟ್ಟಿನಿಂದ ತುರಿಕೆ. ತುರಿಕೆಯಿಂದ ತಪ್ಪಿಸಿಕೊಳ್ಳಲು ಎರಡು ದಿನಕ್ಕೊಮ್ಮೆ ಶಾಂಪೂ. ಇದು ಕೂದಲಿನ ಗುಣಮಟ್ಟವನ್ನು ಮತ್ತಷ್ಟು ಹಾಳು ಮಾಡುತ್ತದೆ. ಹೊಟ್ಟು, ಆಯ್ಲಿ ಸಮಸ್ಯೆಯಿರುವವರು ವಾರಕ್ಕೆರಡು ಬಾರಿ ಬಾಳೆಹಣ್ಣನ್ನು ಮಿಕ್ಸಿಗೆ ಹಾಕಿ ಈ ಪ್ಯಾಕನ್ನು ತಲೆಗೆ ಹಚ್ಚಿಕೊಳ್ಳಬೇಕು.
ಈಗ ಹುಡುಗಿಯರು ತಲೆ ಕೂದಲಿಗೆ ಎಣ್ಣೆ ಹಚ್ಚಿಕೊಳ್ಳುವುದಿಲ್ಲ. ಇದ್ರಿಂದ ಕೂದಲು ಶುಷ್ಕವಾಗುತ್ತದೆ. ಅಂತವರು ಎರಡು ಬಾಳೆಹಣ್ಣಿನ ಜೊತೆ ಮುಲ್ತಾನಿ ಮಿಟ್ಟಿ ಹಾಗೂ ನಿಂಬೆ ರಸವನ್ನು ಮಿಕ್ಸ್ ಮಾಡಿ ತಲೆ ಕೂದಲಿಗೆ ಹಚ್ಚಿಕೊಳ್ಳಿ. 40 ನಿಮಿಷದ ನಂತ್ರ ಕೂದಲನ್ನು ತೊಳೆಯಿರಿ.
ಬಾಳೆಹಣ್ಣಿಗೆ ಒಂದು ಮೊಟ್ಟೆ ಹಾಗೂ ಆಲಿವ್ ಆಯಿಲ್ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿಕೊಳ್ಳುವುದ್ರಿಂದ ಕೂದಲು ಹೊಳಪು ಪಡೆಯುತ್ತದೆ. ವಾರದಲ್ಲಿ 2-3 ದಿನ ಇದನ್ನು ಮಾಡಬೇಕು.