alex Certify ʼಆರೋಗ್ಯʼ ಕಾಪಾಡಿಕೊಳ್ಳಲು ಬೆಸ್ಟ್ ಆಪಲ್‌ ಟೀ; ಫಟಾಫಟ್‌ ಇಳಿಯುತ್ತೆ ತೂಕ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆರೋಗ್ಯʼ ಕಾಪಾಡಿಕೊಳ್ಳಲು ಬೆಸ್ಟ್ ಆಪಲ್‌ ಟೀ; ಫಟಾಫಟ್‌ ಇಳಿಯುತ್ತೆ ತೂಕ…..!

ಪ್ರತಿದಿನ ಒಂದು ಸೇಬುಹಣ್ಣನ್ನು ತಿಂದರೆ ವೈದ್ಯರನ್ನೇ ದೂರವಿಡಬಹುದು ಅನ್ನೋ ಮಾತಿದೆ. ಯಾಕಂದ್ರೆ ಸೇಬು  ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಪೋಷಕಾಂಶಗಳನ್ನು ಹೊಂದಿದೆ. ಇದಲ್ಲದೆ ಸೇಬು ತೂಕವನ್ನು ಕಾಪಾಡಿಕೊಳ್ಳಲು ಸಹ ಬಹಳ ಸಹಾಯಕವಾಗಿದೆ.

ಆಯುರ್ವೇದದ ಪ್ರಕಾರ ಇದು ಹೊಟ್ಟೆಯ ಸಮಸ್ಯೆಗಳಿಗೂ ಪರಿಹಾರ ನೀಡಬಲ್ಲದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇಬು ತಿನ್ನುವುದರಿಂದ ಗರಿಷ್ಠ ಪ್ರಯೋಜನಗಳು ಸಿಗುತ್ತವೆ. ಹೆಚ್ಚಿನ ಜನರು ಬೆಳಿಗ್ಗೆ ಎದ್ದತಕ್ಷಣ  ಚಹಾ ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ನೀವು ಬಯಸಿದರೆ ಸೇಬು ಹಣ್ಣಿನ ಚಹಾವನ್ನು ತಯಾರಿಸಿ  ಕುಡಿಯಬಹುದು. ಆಪಲ್ ಟೀ ಮಾಡೋದ್ಹೇಗೆ? ಅದರಿಂದ ಏನು ಲಾಭವಿದೆ ಅನ್ನೋದನ್ನು ನೋಡೋಣ.  

ತೂಕ ನಷ್ಟಕ್ಕೆ ಪ್ರಯೋಜನಕಾರಿ

ಆಪಲ್ ಟೀ ತೂಕವನ್ನು ಕಡಿಮೆ ಮಾಡಲು ತುಂಬಾ ಸಹಾಯ ಮಾಡುತ್ತದೆ. ಬೆಳಗ್ಗೆ ವ್ಯಾಯಾಮ ಮಾಡಿದ ನಂತರ ಕೂಡ ಆಪಲ್‌ ಟೀ ಕುಡಿಯಬಹುದು. ಆಪಲ್‌ ಟೀ ಸೇವನೆಯಿಂದ ತೂಕ ಇಳಿಕೆಯ ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಸೇಬಿನಲ್ಲಿ ಉತ್ತಮ ಪ್ರಮಾಣದ ಫ್ಲೇವನಾಯ್ಡ್‌ಗಳಿದ್ದು ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ದೃಷ್ಟಿಶಕ್ತಿ ಕಡಿಮೆ ಇರುವವರು ಇದನ್ನು ಸೇವಿಸಬೇಕು.

ಮಧುಮೇಹ ನಿಯಂತ್ರಣಕ್ಕೆ ಸಹಕಾರಿ

ಆಪಲ್ ಟೀಯಲ್ಲಿ ಕೆಲವು ಪೋಷಕಾಂಶಗಳಿವೆ ಅದು ನಿಮ್ಮ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಧುಮೇಹಿಗಳು ಇದನ್ನು ಸೇವಿಸಬೇಕು.ಇದಲ್ಲದೇ ಸೇಬಿನ ಚಹಾ ಕುಡಿಯುವುದರಿಂದ ಮಲಬದ್ಧತೆ ಮತ್ತು ಅಸಿಡಿಟಿ ಸಮಸ್ಯೆಯೂ ಕಡಿಮೆಯಾಗುತ್ತದೆ. ಆಪಲ್ ಟೀ ಕುಡಿಯುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ.

ಆಪಲ್‌ ಟೀ ತಯಾರಿಸುವುದು ಹೇಗೆ ?

ಈ ಚಹಾವನ್ನು ತಯಾರಿಸಲು ನಿಮಗೆ ಸೇಬು, ನಿಂಬೆ ರಸ ಮತ್ತು ದಾಲ್ಚಿನ್ನಿ ಪುಡಿ ಬೇಕು. ಮೊದಲು ಸೇಬನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಪ್ರತ್ಯೇಕವಾಗಿ ಇರಿಸಿ.ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಕುದಿಸಿ ಅದರಲ್ಲಿ ದಾಲ್ಚಿನ್ನಿ ಪುಡಿ ಮತ್ತು ಸೇಬಿನ ತುಂಡುಗಳನ್ನು ಹಾಕಿ ಸುಮಾರು 5 ರಿಂದ 7 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಕುದಿಸಿ. ನೀರು ಅರ್ಧದಷ್ಟಾದಾಗ ಕೆಳಕ್ಕಿಳಿಸಿ ಅದನ್ನು ಫಿಲ್ಟರ್ ಮಾಡಿ ಸ್ವಲ್ಪ ನಿಂಬೆ ರಸವನ್ನು ಮಿಶ್ರಣ ಮಾಡಿಕೊಂಡು ಕುಡಿಯಿರಿ. ನಿಯಮಿತವಾಗಿ ಸೇಬಿನ ಚಹಾ ಕುಡಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಅನುಕೂಲಗಳಾಗುತ್ತವೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...