ಮುಂಬೈ ಇಂಡಿಯನ್ಸ್ ಮೆಂಟರ್ ಸಚಿನ್ ತೆಂಡೂಲ್ಕರ್ ಬುಧವಾರ ತಮ್ಮ 28ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಐಪಿಎಲ್ 2023 ರ ಎಲಿಮಿನೇಟರ್ ಪಂದ್ಯದಲ್ಲಿ MI, ಲಖನೌ ಸೂಪರ್ ಜೈಂಟ್ಸ್ ಅನ್ನು 81 ರನ್‌ಗಳಿಂದ ಸೋಲಿಸಿದ ಕಾರಣ ಸಚಿನ್ ಅವರ ಸಂತೋಷ ಇಮ್ಮಡಿಗೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಕೆಮರೂನ್ ಗ್ರೀನ್ ಅವರ 23 ಎಸೆತಗಳಲ್ಲಿ 41 ರನ್ ಮತ್ತು ಸೂರ್ಯಕುಮಾರ್ ಯಾದವ್ ಮತ್ತು ನೆಹಾಲ್ ವಧೇರಾ ಅವರ ಪ್ರಮುಖ ಪಾತ್ರಗಳ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 182 ರನ್ ಗಳಿಸಿತು. ಪ್ರತ್ಯುತ್ತರವಾಗಿ, ಆಕಾಶ್ ಮಧ್ವಲ್ ಅವರ ಐದು ವಿಕೆಟ್ ಗಳಿಕೆಯು ಎಲ್‌ಎಸ್‌ಜಿಯನ್ನು 101 ರನ್‌ಗಳಿಗೆ ಬಂಡಲ್ ಮಾಡಲು ಸಹಾಯ ಮಾಡಿತು.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಅಪ್‌ಲೋಡ್ ಮಾಡಲಾಗಿದ್ದು, ಇದರಲ್ಲಿ ತಂಡದ ಸಹ-ಮಾಲೀಕರಾದ ನೀತಾ ಅಂಬಾನಿ ಅವರು ಎಮ್‌ಐ ವಿಜಯದ ಬಗ್ಗೆ ಕೆಲವು ಮಾತುಗಳನ್ನು ಹೇಳಲು ಸಚಿನ್ ಅವರನ್ನು ಕೇಳಿದಾಗ ಅವರು ಇದು ನಮ್ಮ ವಿವಾಹ ವಾರ್ಷಿಕೋತ್ಸವದ “ಅತ್ಯುತ್ತಮ ಉಡುಗೊರೆ” ಎಂದಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.