ಉಪ್ಪಿನಿಂದ ಆರೋಗ್ಯ ಕಾಳಜಿ ಮಾತ್ರವಲ್ಲ ಸೌಂದರ್ಯವನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ ಬನ್ನಿ.
ಗಂಟಲು ನೋವಾದಾಗ ಬಿಸಿ ನೀರಿಗೆ ಚಿಟಿಕೆ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ.
ತ್ವಚೆಯಲ್ಲಿ ಗುಳ್ಳೆಗಳಾಗಿದ್ದರೆ ಅಲರ್ಜಿಯ ಲಕ್ಷಣಗಳು ಕಂಡುಬಂದರೆ, ಸ್ನಾನ ಮಾಡುವ ನೀರಿಗೆ ಅರ್ಧ ಮುಷ್ಟಿ ಉಪ್ಪು ಹಾಕಿ ಕರಗಿಸಿ. ಈ ನೀರಿನಿಂದ ಸ್ನಾನ ಮಾಡಿದರೆ ತ್ವಚೆಯ ಸಮಸ್ಯೆಗಳು ದೂರವಾಗುತ್ತದೆ.
ಬಿಸಿಲಿನಿಂದ ತ್ವಚೆ ಕಳೆಗುಂದಿದ್ದರೆ ಕೊಬ್ಬರಿ ಎಣ್ಣೆಗೆ ಉಪ್ಪು ಬೆರೆಸಿ ಸ್ಕ್ರಬ್ ನಂತೆ ಮುಖಕ್ಕೆ ಹಚ್ಚಿ. ಇದು ಸತ್ತ ಜೀವಕೋಶಗಳನ್ನು ತೆಗೆದುಹಾಕಿ ನಿಮ್ಮ ತ್ವಚೆಗೆ ಹೊಳಪು ನೀಡುತ್ತದೆ.
ಜೇನುತುಪ್ಪಕ್ಕೆ ಚಿಟಿಕೆ ಉಪ್ಪು ಬೆರೆಸಿ ಫೇಸ್ ಮಾಸ್ಕ್ ಮಾಡಿಕೊಳ್ಳಿ. 15 ನಿಮಿಷಗಳ ಬಳಿಕ ಮುಖ ತೊಳೆದರೆ ಮೊಡವೆ ಹಾಗೂ ಅದರ ಕಲೆಗಳು ಮಾಯವಾಗುತ್ತದೆ.
ಉಪ್ಪನ್ನು ಟೋನರ್ ನಂತೆಯೂ ಬಳಸಬಹುದು. ಬಾಟಲಿಗೆ ಬೆಚ್ಚಗಿನ ನೀರು ಹಾಕಿ ಉಪ್ಪು ಸೇರಿಸಿ, ಕರಗಿಸಿ. ಹತ್ತಿಯ ಸಹಾಯದಿಂದ ಇದನ್ನು ಮುಖದ ಮೇಲೆ ಹಚ್ಚಿ.