ಜೆರುಸಲೇಂ: ಗಾಜಾ ಪಟ್ಟಿ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ಮುಂದುವರೆದಿದೆ. ಇಸ್ರೇಲ್ ದಾಳಿಯಿಂದ ಇದುವರೆಗೆ 42,519 ಪ್ಯಾಲೇಸ್ತೀನಿಯರು ಸಾವನ್ನಪ್ಪಿದ್ದಾರೆ.
ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಕ್ಷಿಪಣಿ ದಾಳಿ ಮುಂದುವರೆದಿದೆ. ಗಾಜಾ ಪಟ್ಟಿಯಲ್ಲಿ ಹಲವು ತಿಂಗಳಿನಿಂದ ಇಸ್ರೇಲ್ ದಾಳಿ ನಡೆಸುತ್ತಿದೆ. ಕಳೆದ ವರ್ಷ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಹಮಾಸ್ ವಿರುದ್ಧ ಇಸ್ರೇಲ್ ದಾಳಿ ನಡೆಸುತ್ತಿದೆ. ಗಾಜಾಪಟ್ಟಿಯಲ್ಲಿ ಇದುವರೆಗೆ 42,519 ಪ್ಯಾಲೇಸ್ತೀನಿಯರು ಮೃತಪಟ್ಟ ಮಾಹಿತಿ ಇದೆ.
ಹತ್ಯೆ ಯತ್ನದ ಬಳಿಕ ನೆತನ್ಯಾಹು ಮೊದಲ ಪ್ರತಿಕ್ರಿಯೆ:
ನನ್ನ ಮೇಲಿನ ದಾಳಿಗೆ ಪ್ರಯತ್ನ ನಡೆಸಿ ಹಿಜ್ಬುಲ್ಲಾ ತಪ್ಪು ಮಾಡಿದೆ. ನನ್ನನ್ನು ಕೊಲ್ಲುವ ಪ್ರಯತ್ನ ನಡೆಸಿ ದೊಡ್ಡ ತಪ್ಪು ಮಾಡಿದ ಹಿಜ್ಬುಲ್ಲಾ ವಿರುದ್ಧ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಬೆಂಜಮಿನ್ ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಡ್ರೋನ್ನಿಂದ ಅವರ ಮನೆಯನ್ನು ಗುರಿಯಾಗಿಸಿಕೊಂಡ ಪ್ರಧಾನಿ ಬೆಂಜಮಿನ್ ನೆತನ್ಯಾಹು, ತನ್ನನ್ನು ಮತ್ತು ಅವರ ಪತ್ನಿಯನ್ನು ಹತ್ಯೆ ಮಾಡಲು ಪ್ರಯತ್ನಿಸಿದ ಇರಾನ್ನ ಪ್ರಾಕ್ಸಿಗಳು ಗಂಭೀರ ತಪ್ಪು ಮಾಡಿದ್ದಾರೆ ಎಂದು ಹೇಳಿದರು.
ಮೆಡಿಟರೇನಿಯನ್ ಕರಾವಳಿ ಪಟ್ಟಣವಾದ ಸಿಸೇರಿಯಾದಲ್ಲಿರುವ ನೆತನ್ಯಾಹು ಅವರ ಮನೆಯನ್ನು ಡ್ರೋನ್ ಗುರಿಯಾಗಿಸಿಕೊಂಡಿದೆ ಎಂದು ನೆತನ್ಯಾಹು ಅವರ ಕಚೇರಿ ತಿಳಿಸಿದೆ. ಅವರಾಗಲಿ ಅವರ ಹೆಂಡತಿಯಾಗಲಿ ಅಲ್ಲಿ ಇರಲಿಲ್ಲ. ಮನೆಗೆ ಹೊಡೆತ ಬಿದ್ದಿದೆಯೇ ಎಂಬುದು ಸ್ಪಷ್ಟವಾಗಿಲ್ಲ.