ಕ್ರಿಸ್ ಮಸ್ ಆಚರಣೆಗೆ ಕೆಲವೇ ದಿನಗಳು ಬಾಕಿ ಇವೆ. ಡಿಸೆಂಬರ್ 25 ರಂದು ಕ್ರಿಸ್ ಮಸ್ ಆಚರಣೆಗೆ ನಗರಗಳೆಲ್ಲಾ ಸಿದ್ಧತೆಯಲ್ಲಿ ತೊಡಗಿವೆ. ಈ ಪ್ರಕ್ರಿಯೆಯಲ್ಲಿ ಬೆಂಗಳೂರಿನ ಫೀನಿಕ್ಸ್ ಮಾಲ್ ಆಫ್ ಏಷ್ಯಾವು ಭಾರತದ ಅತಿ ಎತ್ತರದ ಕ್ರಿಸ್ಮಸ್ ಟ್ರೀ ಅನಾವರಣಗೊಳಿಸಿದೆ. ಇದರ ಎತ್ತರ ಬರೋಬ್ಬರಿ 100 ಅಡಿ.
ಮಾಲ್ ಗೆ ಭೇಟಿ ನೀಡುವವರಿಗೆ ಈ ದೃಶ್ಯ ಹಬ್ಬದ ಸಂಭ್ರಮ ನೀಡುತ್ತಿದೆ. ಲೈಟ್ಸ್ , ಅಲಂಕಾರಿಕ ವಸ್ತುಗಳಿಂದ ಈ ಬೃಹತ್ ಮತ್ತು ಎತ್ತರದ ಕ್ರಿಸ್ ಮಸ್ ಟ್ರೀ ಸಿದ್ಧವಾಗಿದ್ದು ರಜೆಯ ಮಜಾ ನೀಡುತ್ತಿದೆ. ಕ್ರಿಸ್ ಮಸ್ ಟ್ರೀ ಮತ್ತು ಸಾಂಟಾ ಕ್ಲಾಸ್ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂತೋಷವನ್ನು ಹರಡುತ್ತಿದೆ.
ಇದನ್ನು ನೋಡಿದ ಹಲವರು ವ್ಹಾ ಎಂದು ಉದ್ಘರಿಸಿದ್ದಾರೆ. ಕೆಲವರು ರಾತ್ರಿ 8.30ಕ್ಕೆಲ್ಲಾ ಮಾಲ್ ಮುಚ್ಚುತ್ತಿದ್ದು ಬಂದ್ ಮಾಡುವ ಸಮಯವನ್ನ ವಿಸ್ತರಿಸಿದರೆ ಒಳ್ಳೆಯದು ಎಂದಿದ್ದಾರೆ.
ಮಾಲ್ ಗೆ ಭೇಟಿ ನೀಡಿದವರ ಪ್ರಕಾರ ಈ ಬೃಹತ್ ಕ್ರಿಸ್ ಮಸ್ ಟ್ರೀ ವೀಕ್ಷಣೆಗೆ ಮತ್ತು ಅಲ್ಲಿ ಹಬ್ಬದ ಸಂಭ್ರಮಗಳನ್ನು ಸೆರೆಹಿಡಿಯಲು 200 ರೂಪಾಯಿ ಪ್ರವೇಶ ಶುಲ್ಕವಿದೆ ಎನ್ನಲಾಗಿದೆ.