
ಬೆಂಗಳೂರು: ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್(ಬಿಐಎಎಲ್) ನಿರ್ವಹಿಸುತ್ತಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ) ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಶನಲ್(ಎಸಿಐ) ಪ್ರತಿಷ್ಠಿತ 5 ನೇ ಹಂತದ ಮಾನ್ಯತೆಯನ್ನು ಪಡೆದ ಏಷ್ಯಾದ ಮೊದಲ ವಿಮಾನ ನಿಲ್ದಾಣವಾಗಿದೆ.
ಮೇ 5, 2024 ರಿಂದ ಈ ಗುರುತಿಸುವಿಕೆ ಜಾರಿಗೆ ಬಂದಿದ್ದು, ವಿಮಾನ ನಿಲ್ದಾಣದ ಗಮನಾರ್ಹ ಸಾಧನೆಯನ್ನು ಗುರುತಿಸಿ ಮಾನ್ಯತೆ ನೀಡಲಾಗಿದೆ. ಸ್ಕೋಪ್ 1 ಮತ್ತು 2 ಹಸಿರುಮನೆ ಅನಿಲ(GHG) ಹೊರಸೂಸುವಿಕೆಯಲ್ಲಿ ಗಮನಾರ್ಹವಾದ 95.6% ಕಡಿತವನ್ನು ಪರಿಗಣಿಸಲಾಗಿದೆ.
2030ರ ಗುರಿಗಿಂತ 7 ವರ್ಷಗಳ ಮುಂಚಿತವಾಗಿ ನಿವ್ವಳ ಶೂನ್ಯ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತೆಗೆದುಹಾಕುವ ಗುರಿಯನ್ನು KIA ಸಾಧಿಸಿದೆ. ACI ಯ ಲೆವೆಲ್ 5 ಮಾನ್ಯತೆ ಪಡೆದ ಏಷ್ಯಾದ ಮೊದಲ ವಿಮಾನ ನಿಲ್ದಾಣ ಇದಾಗಿದೆ ಎಂದು BIAL ನ MD ಮತ್ತು CEO ಹರಿ ಮರಾರ್ ಹೇಳಿದ್ದಾರೆ.