ಬೆಂಗಳೂರು: ಬೆಂಗಳೂರಿನಲ್ಲಿ ಭಾರಿ ದುರಂತವೊಂದು ಸ್ವಲ್ಪದರಲ್ಲಿ ತಪ್ಪಿದೆ. ಏರ್ ಟೆಲ್ ಟವರ್ ಏಕಾಏಕಿ ಧರೆಗುಳಿದ ಘಟನೆ ಲಗ್ಗೆರೆಯಲ್ಲಿ ನಡೆದಿದೆ.
ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಈ ಅವಘಡ ಸಂಭವಿಸಿದೆ. ಏರ್ ಟೆಲ್ ಟವರ್ ಅಳವಡಿಸಿದ್ದ ಮನೆಯ ಪಕ್ಕದಲ್ಲಿ ಖಾಲಿ ಸೈಟ್ ಇತ್ತು. ಸೈಟ್ ನಲ್ಲಿ ಮಾಲೀಕರು ಮನೆ ಪಾಯಕ್ಕಾಗಿ ಜೆಸಿಬಿಯಿಂದ ಮಣ್ಣು ತೆಗೆಸುತ್ತಿದ್ದರು. ಈ ವೇಳೆ ಟವರ್ ಇದ್ದ ಮನೆಯ ಪಾಯ ಏಕಾಏಕಿ ಕುಸಿದಿದ್ದು, ನೋಡನೋಡುತ್ತಿದ್ದಂತೆ ಟವರ್ ಧರೆಗುರುಳಿ ಬಿದ್ದಿದೆ.
ಟವರ್ ಕೆಳಗೆ ನಿಂತಿದ್ದ ಜನರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.