alex Certify BREAKING NEWS: ಬೆಂಗಳೂರಿನಲ್ಲಿ ಝೀಕಾ ವೈರಸ್ ಅಬ್ಬರ: 2 ವಾರದಲ್ಲಿ ಐವರಲ್ಲಿ ಸೋಂಕು ದೃಢ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಬೆಂಗಳೂರಿನಲ್ಲಿ ಝೀಕಾ ವೈರಸ್ ಅಬ್ಬರ: 2 ವಾರದಲ್ಲಿ ಐವರಲ್ಲಿ ಸೋಂಕು ದೃಢ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಬೆನ್ನಲ್ಲೇ ಝೀಕಾ ವೈರಸ್ ಅಬ್ಬರ ಆರಂಭವಾಗಿದೆ. ಎರಡು ವಾರಗಳಲ್ಲಿ ಐವರಲ್ಲಿ ಝೀಕಾ ಸೋಂಕು ಪತ್ತೆಯಾಗಿದೆ.

ಬೆಂಗಳೂರಿನ ಜಿಗಣಿ ಪ್ರದೇಶದಲ್ಲಿ ಐವರಲ್ಲಿ ಝೀಕಾ ವೈರಸ್ ದೃಢ ಪಟ್ಟಿದ್ದು, ಸೋಂಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ. ಅಲ್ಲದೇ ಸೋಂಕಿತರ ಕುಟುಂಬದವರ ರಕ್ತದ ಮಾದರಿಯನ್ನು ಸಂಗ್ರಹಿಸಿ ತಪಾಸಣೆಗೆ ಕಳುಹಿಸಲಾಗಿದೆ.

ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದು, ಜಿಗಣಿಯಲ್ಲಿ ಅವರಿಗೆ ಝೀಕಾ ಸೋಂಕು ಪತ್ತೆಯಾಗಿದೆ. ಆತಂಕ ಪಡುವ ಅಗತ್ಯವಿಲ್ಲ. ಗರ್ಭಿಣಿಯರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಆರೋಗ್ಯ ಇಲಾಖೆ ಸೋಂಕಿತರ ಮೇಲೆ ನಿಗಾವಹಿಸಿದೆ ಎಂದು ಹೇಳಿದರು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...