
ಚೆನ್ನೈ: ತಮಿಳುನಾಡಿನಲ್ಲಿ ಬೆಂಗಳೂರಿನ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ರೇವಂತ್ ಕೊಲೆಯಾಗಿರುವ ಯುವಕ. ಯುವಕನ ಕೈಯಲ್ಲಿದ್ದ ಹಚ್ಚೆಯ ಆಧಾರದ ಮೇಲೆ ಯುವಕನ ಬಗ್ಗೆ ತಮಿಳುನಾಡು ಪೊಲೀಸರು ಗುರುತು ಪತ್ತೆ ಮಾಡಿದ್ದಾರೆ. ಮೃತ ಯುವಕ ಬೆಂಗಳೂರಿನ ವರ್ತೂರು ಸಮೀಪದ ಸೂಲಕೊಂಡ ನಿವಾಸಿ ಎಂದು ತಿಳಿದುಬಂದಿದೆ.
ಪರಿಚಯಸ್ಥರಿಒಬ್ಬರು ಕಾರಿನಲ್ಲಿ ರೇವಂತ್ ನನ್ನು ತಮಿಳುನಾಡಿಗೆ ಕರೆದುಕೊಂಡು ಹೋಗಿದ್ದರು. ಎರ್ಡು ದಿನಗಳ ಹಿಂದೆಯೇ ಯುವಕನ ಕೊಲೆಯಾಗಿದೆ ಎಂದು ತಿಳಿದುಬಂದಿದೆ. ತಮಿಳುನಾಡು ಪೊಲೀಸರು ಯುವಕನ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಯಾವಕಾರಣಕ್ಕೆ ಯುವಕನನ್ನು ಕೊಲೆಗೈಯ್ಯಲಾಗಿದೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ.