
ಬೆಂಗಳೂರು: ಗ್ಯಾಂಗ್ ವೊಂದು ನಡು ರಸ್ತೆಯಲ್ಲಿಯೇ ಯುವಕನೊಬ್ಬನನ್ನು ಹಿಡಿದು ಹಿಗಾ ಮುಗ್ಗಾ ಥಳಿಸಿ ಎಳೆದೊಯ್ದಿರುವ ಘಟನೆ ಬೆಂಗಳೂರಿನ ಹೆಚ್ಎಎಲ್ ರಸ್ತೆಯಲ್ಲಿ ನಡೆದಿದೆ.
ಹೆಚ್ಎಎಲ್ ರಸ್ತೆಯ ರಾವ್ ಸ್ಯಾಟಲೈಟ್ ಸೆಂಟರ್ ಬಳಿ ನಿನ್ನೆ ಸಂಜೆ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಬರುತ್ತಿದ್ದ ಯುವಕನನ್ನು 5-6 ಜನರಿದ್ದ ಗುಂಪು ಹಿಡಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ.
ಯುವಕನನ್ನು ಹಿಡಿದು ರಸ್ತೆಗೆ ಅಪ್ಪಳಿಸಿದ್ದಲ್ಲದೇ, ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಕಾಲಿನಿಂದ ಒದ್ದು ಬಳಿಕ ಆತನನ್ನು ಎಳೆದೊಯ್ದಿದ್ದಾರೆ. ಯುವಕನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಪ್ರಕರಣ ಸಂಬಂಧ ಈವರೆಗೆ ಯಾರೂ ದೂರು ದಾಖಲಿಸಿಲ್ಲ. ಸದ್ಯ ವಿಡಿಯೋ ಆಧಾರದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.