ಬೆಂಗಳೂರು: ಕಚೇರಿಯಿಂದ ಮನೆಗೆ ಹೋಗುವ ದಾರಿಯಲ್ಲಿ ಕ್ಯಾಬ್ ಅಥವಾ ಆಟೋವನ್ನು ಕಾಯ್ದಿರಿಸುವಾಗ ಪಡುವ ಪರಿಪಾಟಲು ಅಷ್ಟಿಷ್ಟಲ್ಲ. ಬಹಳ ಕಷ್ಟಪಟ್ಟು ಒಂದು ಕ್ಯಾಬ್ ಬುಕ್ ಮಾಡಿದರೆ, ಚಾಲಕ ನಿಮ್ಮ ಸ್ಥಳಕ್ಕೆ ಬರುತ್ತಾರೆ ಎಂಬ ಖಚಿತತೆ ಇರುವುದಿಲ್ಲ. ಬರುವುದಾಗಿ ಹೇಳಿದರೂ ‘ಆನ್‌ಲೈನ್‌ನಲ್ಲಿ ಪಾವತಿ ಮಾಡುವುದೇ? ಅದೇ ಇದೇ ಎಂಬ ಹಲವು ಪ್ರಶ್ನೆಗಳಿಗೆ ಉತ್ತರವನ್ನೂ ನೀವು ಹೇಳುವ ಅನಿವಾರ್ಯತೆ ಇದೆ.
ಈ ಎಲ್ಲದರ ನಡುವೆ, ಚಾಟ್ ಬಾಕ್ಸ್‌ನಲ್ಲಿ ಚಾಲಕರು ಪ್ರವಾಸವನ್ನು ಹೇಗೆ ನಿರಾಕರಿಸುತ್ತಾರೆ ಎಂಬುದನ್ನು ತೋರಿಸುವ ಹಲವಾರು ಪೋಸ್ಟ್‌ಗಳು ಇಂಟರ್ನೆಟ್ನಲ್ಲಿವೆ. ಅವುಗಳ ಪೈಕಿ ಕೆಲವು ತಮಾಷೆ ಎನ್ನಿಸುವುದೂ ಉಂಟು. ಅಂಥದ್ದೊಂದು ಚಾಟ್ನ ಸ್ಕ್ರೀನ್ಷಾಟ್ ಅನ್ನು ಟ್ವಿಟರ್ ಬಳಕೆದಾರರಾದ ಆಶಿ ಎನ್ನುವವರು ಶೇರ್ ಮಾಡಿದ್ದಾರೆ.
ಆಶಿ ಬೆಂಗಳೂರಿನಲ್ಲಿ ರೈಡ್ ಬುಕ್ ಮಾಡಲು ಬಯಸಿದ್ದರು ಮತ್ತು ಉಬರ್‌ನ ಸೇವೆಗಳನ್ನು ಆಯ್ಕೆ ಮಾಡಿಕೊಂಡರು. ಪ್ರವಾಸಕ್ಕೆ ಒಪ್ಪಿಕೊಂಡ ನಂತರವೂ, ಚಾಟ್ ಬಾಕ್ಸ್‌ನಲ್ಲಿ ಡ್ರೈವರ್ ಬರುವುದಿಲ್ಲ ಎಂದು ತಿರಸ್ಕರಿಸಿದ್ದಾನೆ.
ನಂತರ ಕಾರಣ ಕೇಳಿದಾಗ ಒಂದು ದಿನದ ಸಿಕ್ಕಾಪಟ್ಟೆ ಟ್ರಾಫಿಕ್ ಸಮಸ್ಯೆಯಿಂದ ಸುಸ್ತಾಗಿದೆ ಎಂಬ ಉತ್ತರ ಕೊಟ್ಟಿದ್ದಾನೆ. ಇದರ ಸ್ಕ್ರೀನ್ಷಾಟ್ ಅನ್ನು ಆಶಿ ಶೇರ್ ಮಾಡಿಕೊಂಡಿದ್ದಾರೆ.
ಹಲವು ಸುಳ್ಳು ಹೇಳುವವರ ನಡುವೆ ಈತ ನಿಜ ನುಡಿದಿರುವುದು ಸಂತೋಷ ಎಂದು ಹಲವರು ಹೇಳಿದ್ದಾರೆ.
Tired after a day of hustling at @peakbengaluru pic.twitter.com/XB6QnBWzO6 — Ashi (@ashimhta) January 25, 2023