alex Certify ಡೇಟಿಂಗ್​ ಆಪ್​ ಬಳಕೆ ಮಾಡುವ ಮಹಿಳೆಯರೇ ಎಚ್ಚರ…..! ಪ್ರೀತಿ ಹೆಸರಲ್ಲಿ ನಿಮಗಾಗಬಹುದು ಲಕ್ಷ ಲಕ್ಷ ರೂ. ದೋಖಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೇಟಿಂಗ್​ ಆಪ್​ ಬಳಕೆ ಮಾಡುವ ಮಹಿಳೆಯರೇ ಎಚ್ಚರ…..! ಪ್ರೀತಿ ಹೆಸರಲ್ಲಿ ನಿಮಗಾಗಬಹುದು ಲಕ್ಷ ಲಕ್ಷ ರೂ. ದೋಖಾ….!

ಡೇಟಿಂಗ್​ ಆಪ್​ಗಳನ್ನು ಬಳಕೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೋವಿಡ್​ ಸಾಂಕ್ರಾಮಿಕದ ಬಳಿಕವಂತೂ ಅನೇಕರು ಇಂತಹ ಆಪ್​ಗಳ ಮೊರೆ ಹೋಗ್ತಿದ್ದಾರೆ. ಇದೇ ರೀತಿ ಡೇಟಿಂಗ್​ ಆಪ್​ ಮೂಲಕ ವ್ಯಕ್ತಿಯೊಬ್ಬನ ಪರಿಚಯ ಮಾಡಿಕೊಂಡಿದ್ದ 37 ವರ್ಷದ ಮಹಿಳೆಯು ಬರೋಬ್ಬರಿ 18 ಲಕ್ಷ ರೂಪಾಯಿಯನ್ನು ಕಳೆದುಕೊಂಡ ಘಟನೆಯು ಬೆಂಗಳೂರಿನಲ್ಲಿ ನಡೆದಿದೆ. ಆಸ್ಟಿನ್​ ಟೌನ್​ ನಿವಾಸಿಯಾದ ಮಹಿಳೆಯು ಈ ಸಂಬಂಧ ಪೊಲೀಸರಿಗೆ ದೂರನ್ನು ನೀಡಿದ್ದಾರೆ.

SHOCKING NEWS: ದೇಶವನ್ನೇ ಬೆಚ್ಚಿ ಬೀಳಿಸಿದ ಮತ್ತೊಂದು ಘಟನೆ; ಯುವತಿಗೆ ಡ್ರಗ್ಸ್ ನೀಡಿ ಪೈಶಾಚಿಕ ಕೃತ್ಯ

ಡೇಟಿಂಗ್​ ಆ್ಯಪ್​ನ ಮೂಲಕ ಸೆಪ್ಟೆಂಬರ್​ 30ರಂದು ಈ ಮಹಿಳೆಯು ವ್ಯಕ್ತಿಯೊಬ್ಬನ ಪರಿಚಯ ಮಾಡಿಕೊಂಡಿದ್ದಳು. ತಾನು ವಿದೇಶದಲ್ಲಿ ನೆಲೆಸಿದ್ದೇನೆಂದು ಹೇಳಿಕೊಂಡಿದ್ದ ವ್ಯಕ್ತಿಯು ಈಕೆಯನ್ನು ವಿವಾಹವಾಗಲು ತನಗೆ ಆಸಕ್ತಿ ಇದೆ ಎಂದು ಹೇಳಿದ್ದಾನೆ. ಹೀಗಾಗಿ ಕೆಲವೇ ದಿನಗಳಲ್ಲಿ ನಿನ್ನನ್ನು ಭೇಟಿಯಾಗಲು ಬರೋದಾಗಿಯೂ ಹೇಳಿದ್ದ ಎನ್ನಲಾಗಿದೆ.

ʼಮಾನ್ಸೂನ್ʼ ಮುಗಿದರೂ ಈ ಪ್ರಮಾಣದಲ್ಲಿ ಮಳೆಯಾಗುತ್ತಿರುವುದೇಕೆ…?

ಆದರೆ ಇದಾದ ಬಳಿಕ ತನಗೆ ಕೊಂಚ ಆರ್ಥಿಕ ಸಂಕಷ್ಟ ಉಂಟಾಗಿದೆ ಎಂದಿದ್ದ ವ್ಯಕ್ತಿಯು ಈ ಮಹಿಳೆಯ ಬಳಿಕ ಹಣ ನೀಡುವಂತೆ ಕೇಳಿದ್ದ. ಆತನ ಮಾತನ್ನು ನಂಬಿದ್ದ ಮಹಿಳೆಯು ಒಟ್ಟು 18,29,700 ರೂಪಾಯಿಗಳನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಆದರೆ ಕೆಲ ದಿನಗಳ ಬಳಿಕ ತನಗೆ ವಂಚನೆಯಾಗಿದೆ ಎಂಬ ವಿಚಾರ ಮಹಿಳೆಯ ಗಮನಕ್ಕೆ ಬಂದಿದೆ. ಈ ಸಂಬಂಧ ಮಹಿಳೆಯು ದೂರನ್ನು ದಾಖಲಿಸಿದ್ದು ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...