ಬೆಂಗಳೂರು: ಪಿ ಎಸ್ ಐ ಹುದ್ದೆ ನೇಮಕಾತಿ ಪರೀಕ್ಷೆ ಅಕ್ರಮದ ಬೆನ್ನಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆದ ಸಾಲು ಸಾಲು ಅಕ್ರಮಗಳು ಬಯಲಿಗೆ ಬರುತ್ತಿದ್ದು, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿಯೂ ಅಕ್ರಮ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
2022 ಮಾರ್ಚ್ 14ರಂದು ನಡೆದಿದ್ದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಭೂಗೋಳಶಾಸ್ತ್ರ ಪ್ರಶ್ನೆ ಪತ್ರಿಕೆ ಪರೀಕ್ಷೆಗೂ ಕೆಲ ಗಂಟೆಗೂ ಮೊದಲು ಸೋರಿಕೆಯಾಗಿದ್ದು, ಸೌಮ್ಯ ಎಂಬುವವರ ವಾಟ್ಸಪ್ ಮೂಲಕ 18 ಪ್ರಶ್ನೆಗಳು ರವಾನೆಯಾಗಿತ್ತು.
ಬೆಳಿಗ್ಗೆ 10 ಗಂಟೆಗೆ ನಡೆಯಬೇಕಿದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬೆಳಿಗ್ಗೆ 8:30ಕ್ಕೆ ಲೀಕ್ ಆಗಿದ್ದು, ಅಭ್ಯರ್ಥಿ ಸೌಮ್ಯ ಎಂಬುವವರ ಮೊಬೈಲ್ ವಾಟ್ಸಪ್ ಮೂಲಕ ಹಲವರ ಮೊಬೈಲ್ ಗೆ ಪ್ರಶ್ನೆ ಪತ್ರಿಕೆ ರವಾನೆಯಾಗಿತ್ತು. ಈ ಕುರಿತು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಕೆಎಇ ನಿರ್ದೇಶಕರು ದೂರು ದಾಖಲಿಸಿದ್ದರು.
ದೂರಿನ ಆಧಾರದ ಮೇಲೆ ಇದೀಗ ಮಲ್ಲೇಶ್ವರಂ ಪೊಲೀಸರು ಸೌಮ್ಯ ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.