![](https://kannadadunia.com/wp-content/uploads/2022/04/bomb-blast-story-fb_647_.jpeg)
ಬೆಂಗಳೂರು : ಬೆಂಗಳೂರಿನಲ್ಲಿ ದುರಂತವೊಂದು ನಡೆದಿದ್ದು, ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ನಿಗೂಢ ವಸ್ತು ಸ್ಪೋಟಗೊಂಡಿದ್ದು, ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರಿನ ವೈಟ್ ಫೀಲ್ಡ್ ಠಾಣಾ ವ್ಯಾಫ್ತಿಯಲ್ಲಿ ಜೂನ್ 6 ರ ರಾತ್ರಿ 11.30 ಕ್ಕೆ ಕಟ್ಟಡ ಕಾಮಗಾರಿ ವೇಳೆ ನಿಗೂಢವಸ್ತುವೊಂದು ಸ್ಪೋಟಗೊಂಡಿದ್ದು, ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಸದ್ಯ ಘಟನೆಯಲ್ಲಿ ಗಾಯಗೊಂಡ ಶ್ರೀನಿವಾಸ್, ಮಣಿಕಂಠನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವೈಟ್ ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.