ಬೆಂಗಳೂರು : ಬೆಂಗಳೂರಲ್ಲಿ ಕುಡಿಯುವ ನೀರಿಗೆ ಆಹಾಕಾರ ಉಂಟಾಗಿದ್ದು, ಕಾವೇರಿ ನೀರನ್ನು ಅನ್ಯಬಳಕೆಗೆ ಉಪಯೋಗ ಮಾಡದಂತೆ ಜಲಮಂಡಳಿ ಖಡಕ್ ಆದೇಶ ಹೊರಡಿಸಿದೆ.
ಜಲಮಂಡಳಿ ನಿಯಮ ಉಲ್ಲಂಘಿಸಿ ಮನೆ ಮುಂದೆ ಪೈಪ್ ನಲ್ಲಿ ನೀರು ಹಿಡಿಯುತ್ತಾ ಬೈಕ್ ತೊಳೆಯುತ್ತಿದ್ದ ವ್ಯಕ್ತಿಗೆ 5000 ದಂಡ ವಿಧಿಸಲಾಗಿದೆ. ಜಲಕ್ಷಾಮದ ಮಧ್ಯೆ ಎಚ್ಚರಿಕೆ ವಹಿಸಿದೇ ಕುಡಿಯುವ ನೀರಿನಲ್ಲಿ ಬೈಕ್ ತೊಳೆಯುತ್ತಿದ್ದ ವ್ಯಕ್ತಿಗೆ ದಂಡ ಹಾಕಲಾಗಿದ್ದು, ವಿಡಿಯೋ ವೈರಲ್ ಆಗುತ್ತಿದೆ.
ಬೆಂಗಳೂರಲ್ಲಿ ಕುಡಿಯುವ ನೀರಿಗೆ ಆಹಾಕಾರ ಉಂಟಾಗಿದ್ದು, ಜನಸಾಮಾನ್ಯರ ಸಂಕಷ್ಟ ಹೇಳತೀರದು. ಮಳೆ ಬಾರದೇ ಹಿನ್ನೆಲೆ ರಾಜ್ಯದಲ್ಲಿ ಹೊಳೆ, ಕೆರೆ ಕಟ್ಟೆಗಳು ಬತ್ತಿ ಹೋಗಿದ್ದು, ಜಲ ಸಂಕಷ್ಟ ಎದುರಾಗಿದೆ.