ಬೆಂಗಳೂರು : ಬೆಂಗಳೂರಲ್ಲಿ ಡಿಸಿಪಿ ಕಚೇರಿ ಬಳಿ ದುಷ್ಕರ್ಮಿಯೋರ್ವ ನಡುರಸ್ತೆಯಲ್ಲೇ ಯುವತಿಯ ಬಟ್ಟೆ ಎಳೆದಾಡಿ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬಿನ್ನಿಮಿಲ್ ಬಳಿಯ ನಿವಾಸಿ ಹರೀಶ್ ಎಂದು ಗುರುತಿಸಲಾಗಿದ್ದು, ಈತ ಕೆಲವು ದಿನಗಳ ಹಿಂದೆ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದನು. ಸಂಸ್ತ್ರಸ್ತೆ ನೀಡಿದ ದೂರಿನ ಮೇರೆಗೆ ಪೊಲೀಸರು ಸಿಸಿಟಿವಿ ದೃಶ್ಯಾವಳಿ ವೀಕ್ಷಿಸಿ ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
ವಿಚಾರಣೆ ವೇಳೆ ಆರೋಪಿ ‘ ನಾನು ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿಲ್ಲ, ಸಿಗ್ನಲ್ ಜಂಪ್ ಮಾಡಿದ ವಿಚಾರಕ್ಕೆ ನಮ್ಮಿಬ್ಬರ ನಡುವೆ ಜಗಳವಾಗಿದೆ. ಅತಿರೇಕಕ್ಕೆ ತಿರುಗಿ ಈ ಕೃತ್ಯ ನಡೆದಿದೆ ಎಂದು ಹರೀಶ್ ಹೇಳಿಕೆ ನೀಡಿದ್ದಾರೆ.
ನ.6 ರಂದು ಸೌತ್ ಎಂಡ್ ಸರ್ಕಲ್ ನ ಡಿಸಿಪಿ ಕಚೇರಿ ಎದುರು ಈ ಘಟನೆ ನಡೆದಿತ್ತು. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಯುವತಿಯನ್ನು ಬೈಕ್ ನಲ್ಲಿ ಫಾಲೋ ಮಾಡಿಕೊಂಡು ಬಂದ ದುಷ್ಕರ್ಮಿಯೋರ್ವ ಸೌತ್ ಎಂಡ್ ಸರ್ಕಲ್ ಬಳಿ ಯುವತಿಯ ಬಟ್ಟೆ ಎಳೆದು ಕಿರುಕುಳ ನೀಡಿ ನಂತರ ಯೂ ಟರ್ನ್ ತೆಗೆದುಕೊಂಡು ವಾಪಸ್ ಹೋಗಿದ್ದನು. ರಾತ್ರಿ 10 :30 ರ ವೇಳೆಗೆ ಈ ಘಟನೆ ನಡೆದಿದೆ ಈ ಸಂಬಂಧ ಯುವತಿ ಜಯನಗರ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಿಸಿದ್ದರು.
ಸಾಂದರ್ಭಿಕ ಚಿತ್ರ