ಬೆಂಗಳೂರು: ಲಕ್ಷಾಂತರ ರೂಪಾಯಿ ಸಂಬಂಳದ ಟೆಕ್ಕಿಯೊಬ್ಬ ದುರಾಸೆಗೆ ಬಿದ್ದು ಸ್ಟಾಕ್ ಮಾರ್ಕೆಟ್ ನಲ್ಲಿ ಹಣ ತೊಡಗಿಸಿ ಕೋಟಿ ಕೋಟಿ ಹಣ ಕಳೆದುಕೊಂಡಿದ್ದ. ಆದರೆ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿದ್ದ ಆತ ಸ್ಪೆಷಲ್ ಆಪ್ ತಯಾರಿಸಿ ಬಳಿಕ ಆಪ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಿ ಸಿಕ್ಕಿಬಿದ್ದಿದ್ದಾನೆ.
ಟೆಕ್ಕಿಯಾಗಿದ್ದ ವೈಶಾಕ್ ಸೇರಿ ಮೂವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿದ್ದ ವೈಶಾಕ್ ಗೆ ಒಂದುವರೆ ಲಕ್ಷ ಸಂಭಳ. ಆದರೂ ಹಣದ ಬಗ್ಗೆ ದುರಾಸೆ. ಸ್ಟಾಕ್ ಮಾರ್ಕೆಟ್ ನಲ್ಲಿ ಹಣ ಹೂಡಿಕೆ ಮಾಡಿಕೊಂಡು ಕೋಟಿ ಕೋಟಿ ಹಣ ಕಳೆದುಕೊಂಡಿದ್ದ. ಮತ್ತೆ ಹಣ ಸಂಪಾದಿಸಲು ಆಪ್ ಒಂದನ್ನು ಅಭಿವೃದ್ಧಿ ಮಾಡಿದ್ದ. ಅದರಲ್ಲಿ ಮ್ಯಾಟ್ರಿಮೋನಿ ಮಾದರಿಯಲ್ಲಿ ವಿವಾಹವಾಗ ಬಯಸುವ ಯುವಕ-ಯುವತಿಯರ ಸಂಪರ್ಕಕ್ಕೆ ವೇದಿಕೆಯಂತೆ ಆಪ್ ಮಾಡಿದ್ದ. ಇಷ್ಟಪಟ್ಟಲ್ಲಿ ಯುವಕ-ಯುವತಿ ಸಂಪರ್ಕಿಸಲು ಹಣ ಪಡೆಯುತ್ತಿದ್ದ.
ಈ ಆಪ್ ಗೆ ಕೆಲ ದಿನಗಳಲ್ಲಿ ಬಿಟೆಕ್ ಮುಗಿಸಿದ್ದ ಗೋವಿಂದ ರಾಜ್ ಎಂಬಾತ ಎಂಟ್ರಿಯಾಗಿದ್ದ. ಆತ ಆಪ್ ನ ಪ್ರೈವೆಸಿ ವರ್ಕ್ ನೋಡಿ ಶಾಕ್ ಆಗಿದ್ದ. ವೈಶಾಕ್ ನನ್ನು ಸಂಪರ್ಕಿಸಿದ್ದ ಆತ ಮ್ಯಾಟ್ರಿಮೋನಿ ಬದಲಾಗಿ ವೇಶ್ಯಾವಾಟಿಕೆ ದಂಧೆ ನಡೆಸುವಂತೆ ಕೋಟಿ ಕೋಟಿ ಹಣ ಮಾಡಬಹುದು ಎಂದು ಮೈಂಡ್ ವಾಶ್ ಮಾಡಿದ್ದ. ವಿದೇಶಿ ಮಹಿಳೆಯರಿಗೆ ಡಿಮ್ಯಾಂಡ್ ಇರುವುದಾಗಿಯೂ ಹೇಳಿದ್ದ.
ಹಣದಾಸೆಗೆ ಬಿದ್ದ ವೈಶಾಕ್ ಹಾಗೂ ಗೋವಿಂದ ರಾಜು ಒಳ್ಳೆಯ ಕೆಲಸವನ್ನು ಬಿಟ್ಟು ಕೆಟ್ಟ ಕೆಲಸ ಶುರುಮಾಡಿ ಅಡ್ಡದಾರಿ ಹಿಡಿದಿದ್ದಾರೆ. ಗೋವಿಂದ ರಾಜು ವಿದೇಶಿ ಮಹಿಳೆಯೊಬ್ಬಳ ಸಂಪರ್ಕದಲ್ಲಿದ್ದ ಆಕೆಯಿಂದ ಇನ್ನಷ್ಟು ಹುಡುಗಿಯರನ್ನು ಸೆಳೆದಿದ್ದಾನೆ. ಹೀಗೆ ವೈಶಾಕ್, ಗೋವಿಂದ ರಾಜು ಹಾಗೂ ವಿದೇಶಿ ಮಹಿಳೆ ಸೇರಿಕೊಂಡು ದೊಡ್ಡ ಮಟ್ಟದಲ್ಲಿ ದಂಧೆಯನ್ನು ಶುರುಮಾಡಿದ್ದಾರೆ. ಹಲವು ವರ್ಷಗಳು ಕಳೆದ ಬಳಿಕ ಬೈಯಪ್ಪನಹಳ್ಳಿ ಪೊಲೀಸರಿಗೆ ಈ ಜಾಲದ ಬಗ್ಗೆ ಗೊತ್ತಾಗಿದೆ.
ರಷ್ಯಾ, ಖಜಕಿಸ್ತಾನ ಸೇರಿದಂತೆ ಹಲವು ದೇಶಗಳಿಂದ ಯುವತಿಯರನ್ನು ಕರೆಸುತ್ತಿರುವ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಆರೋಪಿ ವೈಶಾಕ್, ಗೋವಿಂದ ರಾಜು ಹಾಗೂ ವಿಧೇಶಿ ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ವೇಶ್ಯಾವಾಟಿಕೆ ದಂಧೆ ಬಗ್ಗೆ ಬಯಲಾಗಿದೆ.