ಬೆಂಗಳೂರು : ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ “ಬೆಂಗಳೂರು ಟೆಕ್ ಸಮ್ಮಿಟ್-2023 ” ಅತ್ಯಂತ ಯಶಸ್ಸಿನೊಂದಿಗೆ ತೆರೆ ಬಿದ್ದಿದ್ದು, ‘ಬ್ರೇಕಿಂಗ್ ಬೌಂಡರೀಸ್’ ಘೋಷವಾಕ್ಯದೊಂದಿಗೆ ನಡೆದ ಈ ಬಾರಿಯ ಟೆಕ್ ಸಮ್ಮಿಟ್ ಗ್ರೀನ್ ಬಿಟಿಎಸ್ ಎಂದು ಘೋಷಿಸಲಾಯಿತು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವರು, ಬಯೋಟೆಕ್ನಾಲಜಿ ಹಾಗೂ ಅನಿಮೇಷನ್, ವಿಷುಯಲ್ ಎಫೆಕ್ಟ್, ಗೇಮಿಂಗ್ ಅಂಡ್ ಕಾಮಿಕ್ಸ್ ಸಂಬಂಧಿಸಿದ ನೀತಿಗಳನ್ನು ಈ ಬಾರಿಯ ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.
➤ ಬೆಂಗಳೂರು ಟೆಕ್ ಸಮ್ಮಿಟ್ ನಲ್ಲಿ 45 ವಿವಿಧ ದೇಶಗಳು ಪಾಲ್ಗೊಂಡಿದ್ದವು.
➤ 83 ಅಧಿವೇಶಗಳು
➤ 401 ಟೆಕ್ ಸಮ್ಮಿಟ್ ಕುರಿತ ಭಾಷಣಗಳು
➤ 4773 ನೋಂದಾಯಿತ ಪ್ರತಿನಿಧಿಗಳು
➤ 8606ಕ್ಕೂ ಹೆಚ್ಚು ಆಸಕ್ತರು ಪಾಲ್ಗೊಂಡಿದ್ದರು
➤ 18,592 ನೊಂದಾಯಿತ ಉದ್ಯಮಿಗಳು
➤ 50,000ಕ್ಕೂ ಅಧಿಕ ಜನರು ಎಕ್ಸ್‌ಪೋಗೆ ಭೇಟಿ ನೀಡಿದ್ದಾರೆ
➤ 37 ಉತ್ಪನ್ನಗಳ ಬಿಡುಗಡೆ
➤ 553 ಪ್ರದರ್ಶಕರು
➤ ಸಾಮಾಜಿಕ ಜಾಲತಾಣದಲ್ಲಿಯೂ ಸಹ 3.16 ಕೋಟಿಗೂ ಹೆಚ್ಚು ಜನರನ್ನು ತಲುಪಿದೆ.
ದೇಶದಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಆಗಿರುವ ಸಾಧನೆಯನ್ನು ವಿಶ್ವದೆದುರು ತೆರೆದಿಡುವಲ್ಲಿ ನಮ್ಮ “ಬೆಂಗಳೂರು ಟೆಕ್ ಸಮ್ಮಿಟ್ ” ಯಶಸ್ವಿಯಾಗಿದ್ದು, ಕರ್ನಾಟಕವು ತಂತ್ರಜ್ಞಾನ ಕ್ಷೇತ್ರದಲ್ಲಿನ ಅಭಿವೃದ್ದಿಯ ವೇಗವನ್ನು ಕಂಡು ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ ಎಂದರು.
ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್ ಮತ್ತು ಕರ್ನಾಟಕ ಇನ್ನೊವೇಷನ್ ಮತ್ತು ಟೆಕ್ನಾಲಜೀಸ್ ಸೊಸೈಟಿ (ಕಿಟ್ಸ್) ಸಹಭಾಗಿತ್ವ ಹೆಚ್ಚಿಸಲು ಕರ್ನಾಟಕ ಒಪ್ಪಂದಕ್ಕೆ ಸಹಿ ಹಾಕಿದೆ. ಸ್ವಿಡ್ಜರ್ಲೆಂಡ್ ಜೊತೆ ಔಪಚಾರಿಕ ಪಾಲುದಾರಿಕೆಯನ್ನು ರಾಜ್ಯ ಸರ್ಕಾರ ಘೋಷಿಸಿದೆ. ಇದು ಇಂಡೋ ಸ್ವಿಸ್ ಇನ್ನೊವೇಷನ್ ಪ್ಲಾಟ್‌ಫಾರ್ಮ್‌ಗೆ ಒಳಪಡಲಿದೆ. ಇನ್ನು, ನ್ಯೂ ಬ್ರನ್ಸ್‌ವಿಕ್ ಮತ್ತು ಅಸೋಸಿಯೇಷನ್ ಆಫ್ ಬಯೋ ಟೆಕ್ನಾಲಜಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಟೆಕ್ ಸಮ್ಮಿಟ್ 2023 : ಸಹಿ ಹಾಕಲಾದ ಪ್ರಮುಖ 3 ಒಪ್ಪಂದಗಳು
ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್ ಮತ್ತು ಕರ್ನಾಟಕ ಇನ್ನೊವೇಷನ್ ಮತ್ತು ಟೆಕ್ನಾಲಜೀಸ್ ಸೊಸೈಟಿ (ಕಿಟ್ಸ್) ಸಹಭಾಗಿತ್ವ ಹೆಚ್ಚಿಸಲು ಒಪ್ಪಂದ
ಸ್ವಿಡ್ಡರ್ಲೆಂಡ್ ಜೊತೆ ಔಪಚಾರಿಕ ಪಾಲುದಾರಿಕೆ ಘೋಷಣೆ
ನ್ಯೂ ಬ್ರನ್ಸ್‌ವಿಕ್ ಮತ್ತು ಅಸೋಸಿಯೇಷನ್ ಆಫ್ ಬಯೋ ಟೆಕ್ನಾಲಜಿ ಜೊತೆ ಒಪ್ಪಂದ