ಕೆಲವು ತಿಂಗಳ ಹಿಂದೆ ಕ್ರಿಪ್ಟೋಕರೆನ್ಸಿ ವಿಷಯ ಬಹಳ ಚರ್ಚೆಯಲ್ಲಿತ್ತು. ಇದನ್ನು ಬಳಸುವವರು ಶ್ರೀಸಾಮಾನ್ಯ ಅಲ್ಲ ಎಂಬ ಮಾತಿದೆ. ಇದಕ್ಕೆ ವ್ಯತಿರಿಕ್ತ ಎಂಬಂತೆ ಟೀ ಸ್ಟಾಲ್ ಟ್ವಿಟರ್‌ನ ಗಮನ ಸೆಳೆದಿದೆ. ಸ್ಟಾಲ್‌ನ ಬ್ಯಾನರ್ ದಪ್ಪ ಅಕ್ಷರಗಳಲ್ಲಿ “ಇಲ್ಲಿ ಕ್ರಿಪ್ಟೋಕರೆನ್ಸಿಯಲ್ಲಿ ಹಣ ಸ್ವೀಕರಿಸಲಾಗುತ್ತದೆ.”ಎಂದಿದೆ.
‘ಫ್ರಸ್ಟ್ರೇಟೆಡ್ ಡ್ರಾಪ್‌ಔಟ್’ ಟೀ ಸ್ಟಾಲ್ ಎಂಟರ್‌ಪ್ರೈಸ್ ಅನ್ನು ಶುಭಂ ಸೈನಿ ಪ್ರಾರಂಭಿಸಿದ್ದು, ಇಲ್ಲಿ ಬಿಟ್‌ಕಾಯಿನ್ ಸ್ವೀಕರಿಸಲಾಗುತ್ತದೆ. ಹೀಗಾಗಿ ಇದು ಬೆಂಗಳೂರಿನ ಕ್ರಿಪ್ಟೋ ಉತ್ಸಾಹಿಗಳಲ್ಲಿ ಜನಪ್ರಿಯ ತಾಣವಾಗಿದೆ.
ವಿದ್ಯಾರ್ಥಿಯಾಗಿದ್ದಾಗ ಸೈನಿ ಆರಂಭದಲ್ಲಿ ಕ್ರಿಪ್ಟೋ ಟ್ರೇಡಿಂಗ್‌ನಲ್ಲಿ ಸಾಕಷ್ಟು ಲಾಭವನ್ನು ಗಳಿಸಿದರು, ಆದರೆ ಏಪ್ರಿಲ್ 2021 ರಲ್ಲಿ ಕ್ರಿಪ್ಟೋ ಮಾರುಕಟ್ಟೆ ಕುಸಿತಗೊಂಡಾಗ ಆ ನಿರೀಕ್ಷೆಗಳು ಹಳ್ಳಹಿಡಿದಿತ್ತು.
ಹಣಕಾಸಿಗಾಗಿ ಹೆಣಗಾಡುತ್ತಿರುವ ಸೈನಿ ಪಾದಚಾರಿ ಮಾರ್ಗದಲ್ಲಿ ಸಾಧಾರಣ ಟೀ ಸ್ಟಾಲ್ ತೆರೆದರು. ಅವರು ಕ್ರಿಪ್ಟೋವನ್ನು ಪಾವತಿಯ ವಿಧಾನದಲ್ಲಿ ಹಣ ಸ್ವೀಕರಿಸಲು ಪ್ರಾರಂಭಿಸಿದಾಗಿನಿಂದ, ಅವರ ವ್ಯವಹಾರವು ಬೆಳೆಯಿತು.
ವಾರಕ್ಕೆ ಕನಿಷ್ಠ 20 ಗ್ರಾಹಕರು ಕ್ರಿಪ್ಟೋಕರೆನ್ಸಿ ಬಳಸಿ ಪಾವತಿಸುತ್ತಾರೆ ಎಂದು ಸೈನಿ ತಿಳಿಸಿದ್ದು, ಅವರು ಪಾವತಿಗಳನ್ನು ಸ್ವೀಕರಿಸಲು ಕ್ರಿಪ್ಟೋ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತಾರೆ. ಹಾಗೆಯೇ ಡಾಲರ್ ಅನ್ನು ಐಎನ್ಆರ್ ದರಕ್ಕೆ ನವೀಕರಿಸುವ ಫಲಕವನ್ನು ಇರಿಸಿದ್ದಾರೆ.