ಬೆಂಗಳೂರು: ರಾಜ್ಯದಲ್ಲಿ ನಿನ್ನೆ 21,390 ಜನರಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 30,99,519 ಕ್ಕೆ ಏರಿಕೆಯಾಗಿದೆ.
1541 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 29,68,002 ಜನ ಗುಣಮುಖರಾಗಿದ್ದಾರೆ. ನಿನ್ನೆ ಒಂದೇ ದಿನ 10 ಜನ ಸೋಂಕಿತರು ಮೃತಪಟ್ಟಿದ್ದಾರೆ. ಇದುವರೆಗೆ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 38,389 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಬರೋಬ್ಬರಿ 93,099 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 10.96 ರಷ್ಟು ಇದೆ.
ರಾಜಧಾನಿ ಬೆಂಗಳೂರಿನಲ್ಲಿ 15,617 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. 6 ಜನ ಸೋಂಕಿತರು ಮೃತಪಟ್ಟಿದ್ದಾರೆ. 874 ಜನ ಬಿಡುಗಡೆಯಾಗಿದ್ದಾರೆ. 73,654 ಸಕ್ರಿಯ ಪ್ರಕರಣಗಳಿವೆ.
ಬಳ್ಳಾರಿ 180, ಬೆಳಗಾವಿ 269, ಬೆಂಗಳೂರು ಗ್ರಾಮಾಂತರ 310, ಬೀದರ್ 111, ಚಾಮರಾಜನಗರ 106, ಚಿಕ್ಕಬಳ್ಳಾಪುರ 141, ದಕ್ಷಿಣಕನ್ನಡ 519, ದಾವಣಗೆರೆ 137, ಧಾರವಾಡ 264, ಹಾಸನ 409, ಕಲಬುರ್ಗಿ 188, ಕೋಲಾರ 282, ಮಂಡ್ಯ 319, ಮೈಸೂರು 524, ರಾಮನಗರ 135, ಶಿವಮೊಗ್ಗ 201, ತುಮಕೂರು 594, ಉಡುಪಿ 361, ಉತ್ತರಕನ್ನಡ 199 ಹೊಸ ಕೇಸ್ ದಾಖಲಾಗಿವೆ.
ಇವತ್ತು ಬೆಂಗಳೂರಿನಲ್ಲಿ 6, ದಕ್ಷಿಣ ಕನ್ನಡ, ಕಲಬುರ್ಗಿ, ಮೈಸೂರು, ಬಳ್ಳಾರಿಯಲ್ಲಿ ತಲಾ 1 ಸೇರಿ ರಾಜ್ಯದಲ್ಲಿ 10 ಜನ ಸೋಂಕಿತರು ಮೃತಪಟ್ಟಿದ್ದಾರೆ.