ಬೆಂಗಳೂರಿನ ಪ್ರತಿಷ್ಠಿತ ಎಂ.ಎನ್.ಸಿ.ಗಳಲ್ಲಿ ಕೆಲಸ ಮಾಡುವ ಕೈ ತುಂಬ ಪಗಾರ ಪಡೆಯವವರು ಒತ್ತಡದ ಕೆಲದ ನಡುವೆ ಸಣ್ಣ ಸಣ್ಣ ಸಂತೋಷಗಳನ್ನು ಕಾಣಲು ಪ್ರಯತ್ನ ನಡೆಸುವುದುಂಟು. ಇಂತವರ ಸಾಲಿನಲ್ಲಿ ನಿಲ್ಲುವ ಉದಾಹರಣೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಿಖಿಲ್ ಸೇಠ್ ಎಂಬ ಸಾಮಾಜಿಕ ಜಾಲತಾಣ ಬಳಕೆದಾರರು ಬೆಂಗಳೂರು ಲೈಫ್‌ನ ಒಂದು ವಿಚಿತ್ರ ಘಟನೆಯನ್ನು ಹಂಚಿಕೊಂಡಿದ್ದಾರೆ. ಸೇಠ್ ಅವರು ತಾವು ತಲುಪಬೇಕಾಗಿದ್ದ ಸ್ಥಳಕ್ಕೆ ಪ್ರಯಾಣಿಸಲು ರಾಪಿಡೀ ಬೈಕ್ ಅನ್ನು ಬುಕ್ ಮಾಡಿದ್ದರು. ಬೈಕ್ ಕೂಡ ಅವರಿದ್ದಲ್ಲಿ ಬಂದು ಪ್ರಯಾಣವೂ ಶುರುವಾಯಿತು.
ಅದರ ಡ್ರೈವರ್‌ನೊಂದಿಗೆ ಹಾಗೇ ಮಾತನ್ನೂ ಆರಂಭಿಸಿದಾಗ ಗೊತ್ತಾಯಿತು, ಆತ ಮೈಕ್ರೋಸಾಫ್ಟ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಎಂದು ! ಮೈಕ್ರೋಸಾಫ್ಟ್ ದಿಗ್ಗಜ ಐಟಿ ಕಂಪನಿಯಾಗಿದ್ದು, ಆತ ಸಹಜವಾಗಿ ಲಕ್ಷಾಂತರ ರೂ. ಪ್ಯಾಕೇಜು ಪಡೆಯುತ್ತಾನೆ. ಆದರೂ ಏಕೆ ರಾಪಿಡೋ ಓಡಿಸುತ್ತಾನೆ ಎಂಬ ಕುತೂಹಲ ನಿಮಗೂ ಇದೆಯೇ? ಅದಕ್ಕೂ ನಿಖಿಲ್ ಉತ್ತರ ನೀಡಿದ್ದಾರೆ.
ಆ ಮೈಕ್ರೋಸಾಫ್ಟ್ ಇಂಜಿನಿಯರ್‌ಗೆ ಈ ರೀತಿ ವೀಕೆಂಡ್‌ನಲ್ಲಿ ರಾಪಿಡೋ ಓಡಿಸುವುದು ಹವ್ಯಾಸವಂತೆ. ನಿಖಿಲ್ ಪೋಸ್ಟ್ ಸುಮಾರು 1k ಲೈಕ್ ಮತ್ತು ನೂರಾರು ಪ್ರತಿಕ್ರಿಯೆ ಬಂದಿವೆ. ಒಬ್ಬರು ಇದನ್ನು ಪೀಕ್ ಬೆಂಗಳೂರು ನಡವಳಿಕೆ ಎಂದು ಬಣ್ಣಿಸಿದ್ದಾರೆ