ಬೆಂಗಳೂರು: ಮಾಜಿ ಸಿಎಂ ಎಸ್.ಎಂ. ಕೃಷ್ಣ(92) ನಿಧನರಾಗಿದ್ದಾರೆ. ಅವರು ಬೆಂಗಳೂರನ್ನು ಸಿಂಗಾಪುರ ಮಾಡುವ ಕನಸು ಕಂಡಿದ್ದರು. ಆಧುನಿಕ ಬೆಂಗಳೂರು ನಿರ್ಮಾಣದಲ್ಲಿ ಪ್ರಮುಖ ಪಾತ್ರ ಅವರದ್ದಾಗಿದೆ.
ವಿಕಾಸಸೌಧ ನಿರ್ಮಾಣ, ಮೆಟ್ರೋ, ಫ್ಲೈಓವರ್ ಗಳ ನಿರ್ಮಾಣದಲ್ಲಿ, ಬೆಂಗಳೂರನ್ನು ಐಟಿ, ಬಿಟಿ ಸಿಟಿಯಾಗಿ ರೂಪಿಸುವಲ್ಲಿ ಎಸ್.ಎಂ. ಕೃಷ್ಣ ಪ್ರಮುಖ ಪಾತ್ರ ವಹಿಸಿದ್ದಾರೆ.
ಅವರು ರಾಜಕೀಯದಲ್ಲಿ ಸಾಕಷ್ಟು ಏಳು, ಬೀಳು ಕಂಡಿದ್ದರು. ಕಾವೇರಿ ಗಲಾಟೆ, ಬರಗಾಲ ಸಮಸ್ಯೆ, ಡಾ. ರಾಜಕುಮಾರ್ ಅಪಹರಣದಂತಹ ಎಲ್ಲಾ ಸವಾಲುಗಳನ್ನು ದಿಟ್ಟವಾಗಿ ಎದುರಿಸಿದ್ದರು. ರಾಜಕಾರಣದಲ್ಲಿ ಸೈದ್ದಾಂತಿಕ ಟೀಕೆ ಮಾಡುತ್ತಿದ್ದರು. ಶಿಸ್ತು ರೂಢಿಸಿಕೊಂಡಿದ್ದರು. ಅವರು ತಾವು ಕೆಲಸ ಮಾಡಿದ ಕ್ಷೇತ್ರಗಳಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ.