ಬೆಂಗಳೂರು : ತಾಯಿಯನ್ನೇ ಪಾಪಿ ಮಗ ರಾಡ್ ನಿಂದ ಹೊಡೆದು ಕೊಂದ ಘಟನೆ ಬೆಂಗಳೂರಿನ ಕೆ ಆರ್ ಪುರಂನ ಭೀಮಯ್ಯ ಲೇಔಟ್ ನಲ್ಲಿ ನಡೆದಿದೆ.
ತಾಯಿ ಊಟ ಹಾಕಲ್ಲ ಎಂದಿದ್ದಕ್ಕೆ ಪಾಪಿ ಮಗ ಸಿಟ್ಟಿಗೆದ್ದು ಮನೆಯಲ್ಲಿದ್ದ ರಾಡ್ ತೆಗೆದುಕೊಂಡು ತಾಯಿಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆಯಾದ ಮಹಿಳೆಯನ್ನು ನೇತ್ರಾ (40) ಎಂದು ಗುರುತಿಸಲಾಗಿದೆ. ಸುಮಾರು 17 ರಿಂದ 18 ವರ್ಷದ ಮಗ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.ತಾಯಿಯನ್ನು ಕೊಂದ ನಂತರ ಮಗ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.