ರಾಜಧಾನಿ ಬೆಂಗಳೂರು ಭಾನುವಾರ ಅಂದರೆ ಅಕ್ಟೋಬರ್ 3ರಂದು ದಾಖಲೆ ಪ್ರಮಾಣದ ಮಳೆಗೆ ಸಾಕ್ಷಿಯಾಗಿದೆ.
1997ರ ಅಕ್ಟೋಬರ್ ಬಳಿಕ ಬೆಂಗಳೂರಿನಲ್ಲಿ ದಾಖಲಾದ ಗರಿಷ್ಠ ಪ್ರಮಾಣದ ಮಳೆ ಇದಾಗಿದೆ ಎಂಬ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಭಾನುವಾರ ಸಂಜೆಯಿಂದ ಆರಂಭವಾದ ಮಳೆ ರಾಜಧಾನಿ ಬೆಂಗಳೂರಿನಲ್ಲಿ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿತ್ತು.
ಗಮನಿಸಿ…! ರಾಜ್ಯಾದ್ಯಂತ ಮೂರು ದಿನ ಭಾರೀ ಮಳೆ; ಯೆಲ್ಲೋ, ಆರೆಂಜ್ ಅಲರ್ಟ್
ಪಶ್ಚಿಮ ಹಾಗೂ ರಾಜರಾಜೇಶ್ವರಿ ನಗರದಲ್ಲಿ ಮಳೆಯಿಂದ ಭಾರೀ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಬೆಳಗ್ಗೆಯೆಲ್ಲ ವಾತಾವರಣ ಬಿಸಿಲಿನಿಂದ ಕೂಡಿದ್ದರೂ ಸಂಜೆ ವೇಳೆಗೆ ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿದಿದೆ.
ಬೆಂಗಳೂರಿನಲ್ಲಿ ಭಾನುವಾರ 63.8 ಮಿ.ಮೀ ಮಳೆ ದಾಖಲಾಗಿದೆ.ನಾಗರಬಾವಿಯಲ್ಲಿ ಅತೀ ಹೆಚ್ಚು ಅಂದರೆ 117 ಮಿ.ಮೀ ಮಳೆಯಾಗಿದೆ. ಆರ್.ಆರ್. ನಗರದ ಜ್ಞಾನಭಾರತಿ ವಾರ್ಡ್ನಲ್ಲಿ 115 ಮಿ.ಮೀ ಮಳೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಾದೇಶಿಕ ತಜ್ಞರು ಮಾಹಿತಿ ನೀಡಿದ್ದಾರೆ.
ಕೋವಿಡ್ ಮೂರನೇ ಅಲೆ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್, 3 ನೇ ಅಲೆ ಸಾಧ್ಯತೆ ಇಲ್ಲವೆಂದು ಬಾಂಬೆ ಹೈಕೋರ್ಟ್ ಗೆ BMC ಮಾಹಿತಿ
ಆರ್ ಆರ್ ನಗರದ ದಕ್ಷಿಣ ಹಾಗೂ ಪಶ್ಚಿಮ ಭಾಗದಲ್ಲಿ ಭಾನುವಾರ ರಾತ್ರಿ 100 ಮಿ.ಮೀ.ಗಿಂತ ಅಧಿಕ ಪ್ರಮಾಣದ ಮಳೆ ಸುರಿದಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
1997ರ ಅಕ್ಟೋಬರ್ನಲ್ಲಿ ಬೆಂಗಳೂರಿನಲ್ಲಿ 179 ಮಿ.ಮೀ ಮಳೆ ದಾಖಲಾಗಿತ್ತು. ಇದಾದ ಬಳಿಕ ಸುರಿದ ಅತಿಗರಿಷ್ಠ ಪ್ರಮಾಣದ ಮಳೆ ಇದಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.