
ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನನಿಬಿಡ ಪಾರ್ಕ್ ಒಂದರಲ್ಲಿ ಹಾಡಹಗಲೇ ಜೋಡಿ ಕೊಲೆ ನಡೆದಿದೆ.
ಬೆಂಗಳೂರಿನ ಸಾರಕ್ಕಿ ಬಳಿಯಿರುವ ಪಾರ್ಕ್ ನಲ್ಲಿ ಸುರೇಶ್ ಹಾಗೂ ಅನುಷಾ ಎಂಬುವವರನ್ನು ಬರ್ಬರವಾಗಿ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಇಂದು ಸಂಜೆ 4:15ರ ಸುಮಾರಿಗೆ ಸುರೇಶ್ ಹಾಗೂ ಅನುಷಾ ಎಂಬುವವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಜೆ.ಪಿ.ನಗರ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.