
ಬೆಂಗಳೂರು: ಬೆಂಗಳೂರಿನಲ್ಲಿ ಗಮನ ಬೇರೆಡೆ ಸೆಳೆದು ಸುಬ್ರಮಣಿ ಎಂಬುವರ ಬೈಕ್ ನಲ್ಲಿದ್ದ 1.68 ಲಕ್ಷ ರೂಪಾಯಿ ಹಣ ದೋಚಲಾಗಿದೆ.
ಹಲಸೂರಿನ ಮೊದಲಿಯಾರ್ ಸ್ಟ್ರೀಟ್ ನಲ್ಲಿ ಘಟನೆ ನಡೆದಿದೆ. ಪಿಗ್ಮಿ ಸಂಗ್ರಹಿಸುತ್ತಿದ್ದ ಬೈಯಪ್ಪನಹಳ್ಳಿ ನಿವಾಸಿ ಸುಬ್ರಮಣಿ ಅವರ ಹಣ ದೋಚಲಾಗಿದೆ. ಇಂದಿರಾ ನಗರದ ಕೆನರಾ ಬ್ಯಾಂಕ್ ಶಾಖೆಯಲ್ಲಿ 50 ಸಾವಿರ ಡ್ರಾ ಮಾಡಿಕೊಂಡು ಬೈಕ್ ಡಿಕ್ಕಿಯಲ್ಲಿ ಇಟ್ಟಿದ್ದರು. ಅಲ್ಲದೆ, ಪಿಗ್ಮಿ ಸಂಗ್ರಹ ಮಾಡಿದ ಹಣ ಕೂಡ ಬ್ಯಾಗ್ ನಲ್ಲಿ ಇಟ್ಟಿದ್ದರು.
ಅವರನ್ನು ಹಿಂಬಾಲಿಸಿಕೊಂಡು ಬಂದ ಕಳ್ಳರು ಹಲಸೂರಿನ ಮೊದಲಿಯಾರ್ ಸ್ಟ್ರೀಟ್ ನಲ್ಲಿ ಸುಬ್ರಮಣಿ ಅವರ ಗಮನ ಬೇರೆಡೆ ಸೆಳೆದು ಹಣ ದೋಚಿ ಪರಾರಿಯಾಗಿದ್ದಾರೆ. ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.