ಬೆಂಗಳೂರಿನಲ್ಲಿ ದರೋಡೆಕೋರರ ಅಟ್ಟಹಾಸ ಮುಂದುವರೆದಿದೆ. ಆಟೋ ಪ್ರಯಾಣಿಕನಿಗೆ ಮಚ್ಚು ತೋರಿಸಿ 10 ಸಾವಿರ ರೂಪಾಯಿ ದೋಚಲಾಗಿದೆ.
ಮೆಜೆಸ್ಟಿಕ್ ನಿಂದ ಹೆಣ್ಣೂರುಬಂಡೆಗೆ ವ್ಯಕ್ತಿ ಆಟೋದಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಆಟೋ ಹಿಂಬಾಲಿಸಿಕೊಂಡು ಬಂದವರು ದರೋಡೆ ನಡೆಸಿದ್ದಾರೆ. ಆಟೋದಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಮಚ್ಚು ತೋರಿಸಿ ನಗದು ದರೋಡೆ ಮಾಡಿದ್ದಾರೆ. ಅದೇ ರಸ್ತೆಯಲ್ಲಿ ಕಾರ್ ಬಂದಿದ್ದರಿಂದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಆಟೋ ಚಾಲಕ ಹೆಣ್ಣೂರು ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದರೋಡೆ ನಡೆಸಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ.