
ಬೆಂಗಳೂರು: ಬೆಂಗಳೂರಿನಲ್ಲಿ ಜ್ಯೋತಿಷಿ ಪ್ರಮೋದ್ ಮನೆಗೆ ನುಗ್ಗಿ ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದರೋಡೆಗೆ ಸುಪಾರಿ ನೀಡಿದ್ದ ಜ್ಯೋತಿಷಿ ಪಿಎ ಮತ್ತು ಆಕೆಯ ಸಹಚರರನ್ನು ಬಂಧಿಸಲಾಗಿದೆ.
ಕೆಂಗೇರಿ ಠಾಣೆ ಪೊಲೀಸರು ಪಿಎ ಮೇಘನಾ ಮತ್ತು ಕೃತ್ಯವೆಸಗಿದ್ದ ತಂಡವನ್ನು ಬಂಧಿಸಿದ್ದಾರೆ. ತಮಿಳುನಾಡಿನ ಸೇಲಂನಲ್ಲಿ ಆರೋಪಿಗಳನ್ನು ಬಂಧಿಸಿ ಕರೆತರಲಾಗಿದೆ. ಮೇಘನಾ ಜ್ಯೋತಿಷಿ ಪಿಎ ಆಗಿ ಕೆಲಸ ಮಾಡುತ್ತಿದ್ದು, ಸಾಲ ಕೇಳಿದಾಗ ಕೊಡದಿದ್ದಾಗ ದರೋಡೆಗೆ ಸಂಚು ರೂಪಿಸಿದ್ದಳೆನ್ನಲಾಗಿದೆ.
ತಮಿಳುನಾಡಿನ ಮೂವರಿಗೆ ಸುಪಾರಿ ನೀಡಿದ್ದು, ಜು. 10 ರಂದು ಜ್ಯೋತಿಷಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಜ್ಯೋತಿಷಿ ಮೇಲೆ ಹಲ್ಲೆ ನಡೆಸಿ ಮೇಘನಾ ಕೈಕಾಲು ಕಟ್ಟಿ ಹಾಕಿ ದರೋಡೆ ನಡೆಸಿದ್ದರು. ತನಿಖೆ ಕೈಗೊಂಡ ಪೊಲೀಸರು ಮೇಘನಾ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.