
ಏಳು ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆಯ ಪೈಕಿ ರಾಜ್ಯದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. ಮತ ಎಣಿಕೆ ಕಾರ್ಯ ನಾಳೆ ನಡೆಯಲಿದ್ದು, ಬೆಂಗಳೂರಿನಲ್ಲಿ ಮತ ಎಣಿಕೆಗಾಗಿ ಮೂರು ಕೇಂದ್ರಗಳನ್ನು ಗುರುತಿಸಲಾಗಿದೆ. ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜ್, ಜಯನಗರದ ಎನ್ ಎಸ್ ಎಮ್ ಆರ್ ವಿ ಕಾಲೇಜ್ ಹಾಗೂ ಬೆಂಗಳೂರು ಕೇಂದ್ರ ವಿಭಾಗದಲ್ಲಿರುವ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಈ ಮತ ಎಣಿಕೆ ಕೇಂದ್ರಗಳ ಬಳಿ ಬೆಳಗ್ಗೆ 6 ಗಂಟೆಯಿಂದ ಮತ ಎಣಿಕೆ ಕಾರ್ಯ ಪೂರ್ಣಗೊಳ್ಳುವವರೆಗೂ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಅಲ್ಲದೆ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಸಹ ಸೂಚಿಸಲಾಗಿದೆ.
ಮೌಂಟ್ ಕಾರ್ಮೆಲ್ ಕಾಲೇಜು ಮತ ಎಣಿಕಾ ಕೇಂದ್ರ: ಪ್ಯಾಲೆಸ್ ರಸ್ತೆಯ ವಸಂತನಗರ ಕೆಳ ಸೇತುವೆ ಜಂಕ್ಷನ್ ನಿಂದ ಮಿನುಗುತಾರೆ ಕಲ್ಪನಾ ಜಂಕ್ಷನ್ ವರೆಗೆ ಸಂಚಾರ ನಿರ್ಬಂಧಿಸಲಾಗಿದೆ.
ಹಾಗೆಯೇ ಮಿನುಗುತಾರೆ ಕಲ್ಪನಾ ಜಂಕ್ಷನ್ ನಿಂದ ಪ್ಯಾಲೆಸ್ ರಸ್ತೆಯ ವಸಂತನಗರ ಕೆಳ ಸೇತುವೆ ಜಂಕ್ಷನ್ ವರೆಗೆ ಸಂಚಾರ ನಿರ್ಬಂಧಿಸಲಾಗಿದೆ.
ಇನ್ನು ಪರ್ಯಾಯ ಮಾರ್ಗ ಸೂಚಿಸಲಾಗಿದ್ದು, ಪ್ಯಾಲೇಸ್ ರಸ್ತೆಯಿಂದ ಮೌಂಟ್ ಕಾರ್ಮೆಲ್ ಕಾಲೇಜು, ಕಲ್ಪನಾ ಜಂಕ್ಷನ್ ಮತ್ತು ಚಂದ್ರಿಕಾ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳು – ಪ್ಯಾಲೇಸ್ ರಸ್ತೆ – ಎಡ ತಿರುವು – ಚಕ್ರವರ್ತಿ ಲೇಔಟ್ – ಮುಖ್ಯ ಪ್ಯಾಲೇಸ್ – ವಸಂತನಗರ ಅಂಡರ್ ಬ್ರಿಡ್ಜ್ – ಎಡ ತಿರುವು – ಎಂ.ವಿ.ಜಯರಾಮ ರಸ್ತೆ – ಹಳೆ ಉದಯ ಟಿವಿ ಜಂಕ್ಷನ್ – ಎಡ ತಿರುವು – ಕಂಟೋನ್ಮಂಟ್ ರಸ್ತೆಯ ಮೂಲಕ ಸಂಚರಿಸಬಹುದು.
ಬಸವೇಶ್ವರ ಜಂಕ್ಷನ್ ಕಡೆಯಿಂದ ಉದಯ ಟಿವಿ ಜಂಕ್ಷನ್ ಮತ್ತು ಜಯಮಹಲ್ ರಸ್ತೆಯ ಕಡೆಗೆ ಸಂಚರಿಸಲು, ಬಸವೇಶ್ವರ ಜಂಕ್ಷನ್ ಓಲ್ಡ್ ಹೈಗೌಂಡ್ಸ್ ಜಂಕ್ಷನ್ – ಕಲ್ಪನಾ ಜಂಕ್ಷನ್ ಬಲ ತಿರುವು – ಚಂದ್ರಿಕಾ ಜಂಕ್ಷನ್ – ಎಡ ತಿರುವು – ಅಯ್ಯಪ್ಪಸ್ವಾಮಿ ಟೆಂಪಲ್ – ಉದಯ ಟಿವಿ ಜಂಕ್ಷನ್ ಕಡೆಯಿಂದ – ಎಡ ತಿರುವು – ಎಂ.ವಿ. ಜಯರಾಂ ರಸ್ತೆ ಅಥವಾ ನೇರ – ಜಯಮಹಲ್ ರಸ್ತೆ ಅಥವಾ ಬಲ ತಿರುವು ರೈಲ್ವೆ ಸ್ಪಷನ್ ರಸ್ತೆ – ಕಂಟೋನ್ಮಂಟ್ ಮೂಲಕ ಫ್ರೇಜರ್ ಟೌನ್ ಅಥವಾ ಕ್ವೀನ್ಸ್ ರಸ್ತೆಯ ಮೂಲಕ ತೆರಳಬಹುದು.
ಎಸ್ ಎಸ್ ಎಮ್ ಆರ್ ವಿ ಕಾಲೇಜು ಎಣಿಕಾ ಕೇಂದ್ರ: 18ನೇ ಮುಖ್ಯ ರಸ್ತೆ ಮತ್ತು 28 ನೇ ಮುಖ್ಯ ರಸ್ತೆಯ ಮಧ್ಯದಲ್ಲಿ ಬರುವ 36ನೇ ಕ್ರಾಸ್ ಸಂಚಾರ ನಿರ್ಬಂಧವಿರಲಿದೆ.
32ನೇ ಇ ಕ್ರಾಸ್ ರಸ್ತೆ ಮತ್ತು 39ನೇ ಕ್ರಾಸ್ ರಸ್ತೆ ಜಂಕ್ಷನ್ ನಡುವೆ ಬರುವ 26ನೇ ಮುಖ್ಯರಸ್ತೆಯಲ್ಲಿ ಸಂಚಾರ ನಿರ್ಬಂಧವಿರಲಿದೆ.
ಇನ್ನು ಪರ್ಯಾಯ ಮಾರ್ಗಕ್ಕಾಗಿ ಈಸ್ಟ್ ಎಂಡ್ ಮುಖ್ಯ ರಸ್ತೆ, 39ನೇ ಕ್ರಾಸ್ ರಸ್ತೆ, 18ನೇ ಮುಖ್ಯ ರಸ್ತೆ, 32ನೇ ಇ-ಕ್ರಾಸ್ ರಸ್ತೆಗಳನ್ನು ಬಳಸಬಹುದು ಎಂದು ತಿಳಿಸಲಾಗಿದೆ.
ಸೇಂಟ್ ಜೋಸೆಫ್ ಕಾಲೇಜು ವಾಹನ ನಿಲುಗಡೆ ನಿಷೇಧಿತ ರಸ್ತೆಗಳನ್ನು ಗುರುತಿಸಲಾಗಿದ್ದು, ವಿಠಲ್ ಮಲ್ಯ ರಸ್ತೆ – ಸಿದ್ದಲಿಂಗಯ್ಯ ವೃತ್ತದಿಂದ ರಿಚ್ಮಂಡ್ ಜಂಕ್ಷನ್ವರೆಗೆ
ಆರ್.ಆರ್.ಎಂ.ಆರ್ ರಸ್ತೆ – ರಿಚ್ಮಂಡ್ ಸರ್ಕಲ್ನಿಂದ ಹಡ್ಸನ್ ಜಂಕ್ಷನ್ ತನಕ
ಎನ್.ಆರ್ ರಸ್ತೆ – ಹಡ್ಸನ್ ಸರ್ಕಲ್ನಿಂದ ಟೌನ್ ಹಾಲ್ ಜಂಕ್ಷನ್ವರೆಗೆ
ಕೆ.ಬಿ ರಸ್ತೆ – ಹೆಚ್ಎಲ್ಡಿ ಜಂಕ್ಷನ್ನಿಂದ ಕ್ವೀನ್ಸ್ ಜಂಕ್ಷನ್ ತನಕ
ಕೆ.ಜಿ ರಸ್ತೆ – ಪೊಲೀಸ್ ಕಾರ್ನರ್ ಜಂಕ್ಷನ್ನಿಂದ ಮೈಸೂರು ಬ್ಯಾಂಕ್ ಜಂಕ್ಷನ್ವರೆಗೆ
ನೃಪತುಂಗ ರಸ್ತೆ – ಕೆ.ಆರ್ ಜಂಕ್ಷನ್ನಿಂದ ಪೊಲೀಸ್ ಕಾರ್ನರ್ವರೆಗೆ
ಕ್ವೀನ್ಸ್ ರಸ್ತೆ – ಬಾಳೇಕುಂದ್ರಿ ಸರ್ಕಲ್ನಿಂದ ಸಿ.ಟಿ.ಒ ಸರ್ಕಲ್ ತನಕ
ಸೆಂಟ್ರಲ್ ಸ್ಟ್ರೀಟ್ ರಸ್ತೆ – ಬಿ.ಆರ್.ವಿ ಜಂಕ್ಷನ್ನಿಂದ ಅನಿಲ್ ಕುಂಬ್ಳೆ ವೃತ್ತದವರೆಗೆ
ಎಂ.ಜಿ ರಸ್ತೆ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ಜಂಕ್ಷನ್ವರೆಗೆ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ.
ಸೇಂಟ್ ಜೋಸೆಫ್ ಕಾಲೇಜು ಮೈದಾನ ಹಾಗೂ ಕಂಠೀರವ ಸ್ಟೇಡಿಯಂ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳನ್ನು ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ.