ಬೆಂಗಳೂರಿನ ರಸ್ತೆಯಲ್ಲಿ ಭತ್ತ ನಾಟಿ, 20 ರೂ. ಗಳಿಗೆ ರಸ್ತೆಗುಂಡಿಯಲ್ಲೇ ಬೋಟ್ ರೈಡ್ 06-09-2021 8:26AM IST / No Comments / Posted In: Karnataka, Latest News, Live News ಬೆಂಗಳೂರಿನ ರಸ್ತೆಗಳಲ್ಲಿ ಕನಿಷ್ಠ ಒಂದು ಅಡಿಗಳಷ್ಟು ಗುಂಡಿಗಳು ಕಾಣುವುದು ಸಾಮಾನ್ಯ ಆಗಿಬಿಟ್ಟಿದೆ. ಅದರಲ್ಲೂ ಬಿಬಿಎಂಪಿ ವ್ಯಾಪ್ತಿಯ ಹೊರವಲಯದಲ್ಲಿರುವ ಪ್ರದೇಶಗಳಲ್ಲಿ ರಸ್ತೆಗಳೇ ಇಲ್ಲ. ರಸ್ತೆಗಳು ಕಿತ್ತುಹೋಗಿ ವರ್ಷಗಳಾಗಿ, ಕೇವಲ ಮಣ್ಣಿನ ಆಳದ ಗುಂಡಿಗಳು ಮಾತ್ರವೇ ಉಳಿದಿವೆ. ಮಳೆ ಸುರಿದಾಗ ಈ ಗುಂಡಿಗಳೇ ಕೆರೆಗಳಾಗುತ್ತವೆ ! ಗುಂಡಿ ಬಿದ್ದ ರಸ್ತೆಯಲ್ಲಿ ’ಕ್ಯಾಟ್‌ವಾಕ್’: ಮಹಿಳೆಯರ ವಿಭಿನ್ನ ಪ್ರತಿಭಟನೆ ಹೌದು, ಹಾಗಾಗಿಯೇ ಇಂಥದ್ದೊಂದು ಕೆಟ್ಟ ಸ್ಥಿತಿಯ ರಸ್ತೆಯ ಬವಣೆಯಿಂದ ಬೇಸತ್ತ ಪ್ರದೇಶದ ನಿವಾಸಿಗರು, ಮಳೆ ಬಂದು ಕೊಚ್ಚೆ ನೀರು ತುಂಬಿದ್ದ ರಸ್ತೆಯಲ್ಲಿ ಭತ್ತದ ನಾಟಿ ಮಾಡಿದ್ದಾರೆ. 20 ರೂ. ಗಳಿಗೆ ಈ ಕೊಚ್ಚೆ ನೀರಿನ ಗುಂಡಿಗಳಲ್ಲಿ ತೆಪ್ಪ ಓಡಿಸಿ, ಪ್ರತಿಭಟನೆ ನಡೆಸಿದ್ದಾರೆ. ಕನಕಪುರ ರಸ್ತೆ ಬಳಿಯ ಅಂಜನಾಪುರದಲ್ಲಿ(ವಾರ್ಡ್ ಸಂಖ್ಯೆ 196) ಈ ವಿಶಿಷ್ಟ ರೀತಿಯ ಪ್ರತಿಭಟನೆ ನಡೆದಿದೆ. ಬಿಜೆಪಿ ಶಾಸಕ ಎಂ. ಕೃಷ್ಣಪ್ಪ ಅವರ ವಿರುದ್ಧ ಕೂಡ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಆಡಳಿತಾರೂಢ ಬಿಜೆಪಿ ಸರ್ಕಾರ, ಬಿಬಿಎಂಪಿ ಮತ್ತು ಬಿಡಿಎ ಅಧಿಕಾರಿಗಳ ಗಮನಕ್ಕೆ ರಸ್ತೆಯ ಸಮಸ್ಯೆಯನ್ನು ತರಲು ಯತ್ನಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಪರೋಕ್ಷವಾಗಿ ಮಾಡಿದ ಕಪಾಳಮೋಕ್ಷ ಕೂಡ ಇದಾಗಿದೆ ಎಂದರೆ ತಪ್ಪಿಲ್ಲ. Karnataka | Residents of Bengaluru's Anjanapura protested against the civic authority by planting paddy saplings and offering boat rides for Rs 20 on a potholed road yesterday pic.twitter.com/QcgtnhGEg6 — ANI (@ANI) September 5, 2021