ಅಕಾಲಿಕ ಮಳೆಯಿಂದ ಬೆಂಗಳೂರಿನಲ್ಲಿ ಕೇವಲ 15ದಿನದಲ್ಲಿ 80 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಎಲ್ಲಾ ವಾರ್ಡ್‌ಗಳಲ್ಲಿ ಬಿಬಿಎಂಪಿ ಪೌರ ಅಧಿಕಾರಿಗಳು ಮನೆಮನೆಗೆ ತೆರಳಿ ಸರ್ವೆ ನಡೆಸುತ್ತಿದ್ದಾರೆ. ಬಿಬಿಎಂಪಿ ಆರೋಗ್ಯಾಧಿಕಾರಿಗಳಾಗಿರೋ ಡಾ. ಕೆ.ವಿ. ತ್ರಿಲೋಕ ಚಂದ್ರಾ ಈಗಾಗಲೇ ಕ್ರಮ ಕೈಗೊಂಡಿದ್ದು. ಡೆಂಗ್ಯೂ ಕುರಿತಾಗಿ ಜನರಿಗೆ ಅರಿವಾಗುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಿ ಅಂತ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೇ ನೀರು ತುಂಬಾ ದಿನ ಶೇಖರಣೆ ಮಾಡಿಡುವುದರಿಂದ ಆಗುವ ಅಪಾಯವನ್ನ ಜನರಿಗೆ ಮನವರಿಕೆ ಮಾಡಿಸಿ ಅಂತ ಹೇಳಿದ್ದಾರೆ.
ಪ್ರವಾಹ ಪೀಡಿತ ಅಸ್ಸಾಂನಲ್ಲಿ ಐಎಎಸ್ ಅಧಿಕಾರಿಗೆ ದಣಿವರಿಯದ ಕೆಲಸ; ನೆಟ್ಟಿಗರ ಶ್ಲಾಘನೆ
ಇದೀಗ ವರದಿಯಾಗಿರುವ ಪ್ರಕಾರ 80 ಡೆಂಗ್ಯೂ ಪ್ರಕರಣಗಳಲ್ಲಿ ಶೇಕಡಾ 50ರಷ್ಟು ಪ್ರಕರಣಗಳು ಪೂರ್ವ ಬೆಂಗಳೂರು ಮತ್ತು ಮಹದೇವಪುರ ವಲಯದಲ್ಲಿ ಪತ್ತೆಯಾಗಿವೆ. ಪೂರ್ವ ವಲಯದಲ್ಲಿ 24 ಪ್ರಕರಣ ದಾಖಲಾದರೆ, ಮಹದೇವಪುರದಲ್ಲಿ 21 ಪ್ರಕರಣ ಪತ್ತೆಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಡೆಂಗ್ಯೂ ಪ್ರಕರಣಗಳು ತುಂಬಾ ಕಡಿಮೆ ಪ್ರಮಾಣದಲ್ಲಿ ಪತ್ತೆಯಾಗಿವೆ ಅಂತ ಡಾಕ್ಟರ್. ತಿಲೋಕ ಚಂದ್ರಾ ಹೇಳಿದ್ದಾರೆ.
‘ನಾವು ಮೂರು ವರ್ಷಗಳ ಹಿಂದೆ 12ಸಾವಿರ ಪ್ರಕರಣಗಳನ್ನ ದಾಖಲಿಸಿಕೊಂಡಿದ್ದೆವು. ಆದರೆ ಈ ವರ್ಷ ಒಟ್ಟು 400 ಪ್ರಕರಣ ಕಂಡು ಬಂದಿವೆ. ಇದೆಲ್ಲವನ್ನ ಗಮನಿಸಿದರೆ ಗಾಬರಿ ಪಡುವಂತಹ ಯಾವುದೇ ಸ್ಥಿತಿ ನಿರ್ಮಾಣವಾಗಿಲ್ಲ ಅಂತ ಹೇಳಿದ್ದಾರೆ.