ಬೆಂಗಳೂರು : ಕಾಲೇಜಿನಲ್ಲಿ ವಿದ್ಯಾರ್ಥಿಯೋರ್ವ ಮೊಬೈಲ್ ನಲ್ಲಿ ರೀಲ್ಸ್ ಮಾಡಿದ್ದು , ರೊಚ್ಚಿಗೆದ್ದ ಪ್ರಿನ್ಸಿ ಪಾಲರು ಮೊಬೈಲ್ ಪುಡಿ ಪುಡಿ ಮಾಡಿದ್ದಾರೆ. ಈ ಘಟನೆ ಪೊಲೀಸ್ ಠಾಣೆವರೆಗೂ ಹೋಗಿದೆ.
ಹೌದು, ಶಾಲಾ ಕಾಲೇಜುಗಳಿಗೆ ಮೊಬೈಲ್ ತೆಗೆದುಕೊಂಡು ಹೋಗಬಾರದು ಎಂಬ ರೂಲ್ಸ್ ಇದ್ರೂ, ಮಕ್ಕಳು ಕದ್ದು ಮುಚ್ಚಿ ಮೊಬೈಲ್ ತರ್ತಾರೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಪ್ರಿನ್ಸಿಪಾಲ್ ಮೊಬೈಲ್ ಒಡೆದು ಹಾಕಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಹೊಸಕೋಟೆಯ ಖಾಸಗಿ ಕಾಲೇಜೊಂದರಲ್ಲಿ ಈ ಘಟನೆ ನಡೆದಿದೆ. ತರಗತಿಗೆ ಮೊಬೈಲ್ ತರದಂತೆ ಪ್ರಿನ್ಸಿಪಾಲರು ವಾರ್ನ್ ಮಾಡಿದ್ದರು. ಆದರೆ ವಿದ್ಯಾರ್ಥಿ ಸೂರ್ಯ ಎಂಬಾತ ಕ್ಲಾಸಿಗೆ ಮೊಬೈಲ್ ತಂದಿದ್ದು, ತರಗತಿ ನಡೆಯುತ್ತಿದ್ದ ವೇಳೆ ಸ್ನೇಹಿತರು ಹಾಗೂ ಸೂರ್ಯ ರೀಲ್ಸ್ ಮಾಡ್ತಿದ್ದರಂತೆ. ಇದನ್ನು ನೋಡಿದ ಪ್ರಿನ್ಸಿಪಾಲರು ಮೊಬೈಲ್ ಪುಡಿ ಪುಡಿ ಮಾಡಿದ್ದಾರೆ. ಇದರಿಂದ ಗರಂ ಆದ ವಿದ್ಯಾರ್ಥಿ ಹಾಗೂ ಪೋಷಕರು ಪ್ರಾಂಶುಪಾಲರ ವಿರುದ್ಧ ಹೊಸಕೋಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.