ಬೆಂಗಳೂರು: ಬೆಂಗಳೂರಿನ ಕುಂದಲಹಳ್ಳಿ ಬಳಿಯ ರಾಮೇಶ್ವರಂ ಕೆಫೆ ಸ್ಫೊಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಸಲ್ಲಿಸಿರುವ ಚಾರ್ಜ್ ಶೀಟ್ ಇನ್ನಷ್ಟು ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ.
ಆರೋಪಿಗಳು ಐಸಿಸ್ ನಿಂದ ತರಬೇತಿ ಪಡೆದು ಸ್ಫೋಟ ನಡೆಸಿದ್ದಾರೆ ಎಂಬುದು ಬಹಿರಂಗವಾಗಿದೆ. ಆರೋಪಿಗಳು ಕೇವಲ ಒಂದು ವಾರ ಆನ್ ಲೈನ್ ಮೂಲಕ ಐಸಿಸ್ ತರಬೇತು ಪಡೆದುಕೊಂಡು ಬಾಂಬ್ ತಯಾರಿಸಿದ್ದಾರೆ.
ಪ್ರಕರಣದ ಆರೋಪಿಗಳಾದ ಅಬ್ದುಲ್ ಮತೀನ್ ತಾಹ, ಮುಸಾವೀರ್ ಹುಸೇನ್, ಶಾರಿಕ್, ಅರಾಫತ್ ಅಲಿ,ಮಾಜ್ ಮುನೀರ್ ಹಾಗೂ ಮುಜಾಮಿಲ್ ಷರೀಫ್ ಐಸಿಸ್ ಜೊತೆ ನಂಟು ಇಟ್ಟುಕೊಂಡಿದ್ದರು. ಈ ಆರು ಜನ ಶಂಕಿಇತ ಉಗ್ರರ ಪೈಕಿ ನಾಲ್ವರಿಗೆ ಐಸಿಸ್ ಬಾಂಬ್ ತಯಾರಿಕಾ ತರಬೇತಿ ನೀಡಿದೆ.
ಕೇವಲ ಒಂದು ವಾರದಲ್ಲೇ ತರಬೇತಿ ಪಡೆದು ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳನ್ನು ಆನ್ ಲೈನ್ ಮೂಲಕ ಖರೀದಿಸಿ, ಒಂದು ವಾರದಲ್ಲಿ ಬಾಂಬ್ ತಯಾರಿಸಿದ್ದಾರೆ. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್, ಬಿಜೆಪಿ ಕಚೇರಿ ಬಳಿ ಇಟ್ಟಿದ್ದ ಬಾಂಬ್ ಹಾಗೂ ರಾಮೇಶ್ವರಂ ಕೆಫೆಯಲ್ಲಿ ಇತ್ಟಿದ್ದ ಬಾಂಬ್ ಕೇವಲ ಒಂದು ವಾರದಲ್ಲಿ ತಯಾರಿಸಿದ್ದು ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.