ಬೆಂಗಳೂರು: ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪ್ಲಾಟ್ಫಾರಂ 5 ರಲ್ಲಿ ನಿರ್ಮಿಸಲಾಗಿದ್ದ ಪ್ರಾರ್ಥನಾ ಮಂದಿರ ತೆರವುಗೊಳಿಸಲಾಗಿದೆ.
ವಿಶ್ರಾಂತಿ ಕೊಠಡಿಯನ್ನು ಮಸೀದಿಯಾಗಿ ಪರಿವರ್ತಿಸಿ ಪ್ರಾರ್ಥನೆ ಮಾಡಲಾಗುತ್ತಿತ್ತು. ಮಸೀದಿ ತೆರವುಗೊಳಿಸಿ ನೌಕರರ ವಿಶ್ರಾಂತಿ ಗೃಹಕ್ಕೆ ಮೀಸಲಿಡಲಾಗಿದೆ. ಹಿಂದೂ ಪರ ಸಂಘಟನೆಗಳಿಂದ ದೂರು ಹಿನ್ನೆಲೆಯಲ್ಲಿ ಮಸೀದಿ ತೆರವುಗೊಳಿಸಲಾಗಿದೆ. ವಿಶ್ರಾಂತಿ ಗೃಹದಲ್ಲಿ ಇದ್ದ ಉರ್ದು ಭಾಷೆಯ ನಾಮಫಲಕವನ್ನು ತೆರವು ಮಾಡಲಾಗಿದೆ.
ರೈಲು ನಿಲ್ದಾಣದಲ್ಲಿ ಮಸೀದಿ ನಿರ್ಮಿಸಿ ಪ್ರಾರ್ಥನೆಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದ್ದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.