ಬೆಂಗಳೂರು: ತುರ್ತು ನಿರ್ವಹಣಾ ಕಾರ್ಯಗಳಿಗಾಗಿ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಎರಡು ದಿನ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮಾಹಿತಿ ನೀಡಿದೆ.
ಕೋರಮಂಗಲ ಸೇರಿದಂತೆ ಹಲವು ಪ್ರದೇಶಗಳಲ್ಲಿ ಡಿಸೆಂಬರ್ 17 ಮತ್ತು 18 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ವಿದ್ಯುತ್ ಕಡಿತವಾಗಲಿದೆ.ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳ ಪಟ್ಟಿ ಬೆಸ್ಕಾಂ ಬಿಡುಗಡೆ ಮಾಡಿದೆ.
ಬೆಂಗಳೂರು, ಡಿಸೆಂಬರ್ 16: ತುರ್ತು ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಬೆಂಗಳೂರಿನಕೋರಮಂಗಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ . ಕೋರಮಂಗಲದಲ್ಲಿ ಮಂಗಳವಾರ ಡಿಸೆಂಬರ್ 17 ಮತ್ತು ಬುಧವಾರ ಡಿಸೆಂಬರ್ 18 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಸೇಂಟ್ ಜಾನ್ ವುಡ್ ಅಪಾರ್ಟ್‌ಮೆಂಟ್ ಆ್ಯಂಡ್ ಆಸ್ಪತ್ರೆ, ತಾವರೆಕೆರೆ, ಆಕ್ಸೆಂಚರ್, ಒರಕಲ್, ಕ್ರೈಸ್ಟ್ ಕಾಲೇಜು, ಬಿಟಿಎಂ ಲೇಔಟ್, ಮೆಜೆಸ್ಟಿಕ್ ಅಪಾರ್ಟ್‌ಮೆಂಟ್, ಅಕ್ಸಾ, ಆಸಿಸ್ ಭವನ್, ಸುದ್ದಗುಂಟೆ ಪಾಳ್ಯ, ಗುರಪ್ಪನ ಲೇಔಟ್, ವಿಕ್ಟೋರಿಯಾ ಲೇಔಟ್, ಪಾಮ್ ಗ್ರೂವ್ ರೋಡ್, ಬಾಲಾಜಿ ಥಿಯೆಟರ್, ಅಗ್ರಂ ವಿವೇಕಾನಗರ, ಸಣ್ಣೆನಗಹಳ್ಳಿ, ವೋನ್ನರ್, ಆಂಜನೇಯ ಟೆಂಪಲ್ ಸ್ಟ್ರೀಟ್, ಕೆಎಸ್ಆರ್ಪಿ ಕ್ವಾಟ್ರಸ್, ಲಿಂಡನ್, ಯಲಂಗುಂಟೆ ಪಾಳ್ಯಮ್, ಏರ್ ಫೋರ್ಸ್, ರೋಡ್, ರುದ್ರಪ್ಪ ಗಾರ್ಡನ್, ಎಂ.ಜಿ ಗಾರ್ಡನ್, ಆಸ್ತಿನ್ ಟೌನ್, ನೀಲಸಂದ್ರ, ಬಜಾರ್, ಆರ್ಕೆ ಗಾರ್ಡನ್, ಬೆಂಗಳೂರು ಫರ್ನಿಚರ್, ರೋಸ್ ಗಾರ್ಡನ್, ಒಆರ್. ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.
ವಿದ್ಯುತ್ ಸಂಬಂಧಿತ ದೂರುಗಳಿಗೆ ಸಹಾಯವಾಣಿ:
ಬೆಂಗಳೂರು ನಗರ:- ದಕ್ಷಿಣ ವೃತ್ತ: 8277884011, ಪಶ್ಚಿಮ ವೃತ್ತ: 8277884012, ಪೂರ್ವ ವೃತ್ತ: 8277884013, ಉತ್ತರ ವೃತ್ತ: 8277884014
ಕೋಲಾರ: 8277884015, ಚಿಕ್ಕಬಳ್ಳಾಪುರ : 8277884016, ಬಿಆರ್ಸಿ: 8277884017, ರಾಮನಗರ: 8277884018, ತುಮಕೂರು: 8277884019, ಚಿತ್ರದುರ್ಗ: 8277884020, ದಾವಣಗೆರೆ: 8277884021