ಬೆಂಗಳೂರು: ರಾಜ್ಯಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೀಪಾವಳಿ ಸಂಭ್ರಮಕ್ಕೆ ಪಟಾಕಿ ಅಬ್ಬರವೂ ಜೋರಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪಟಾಕಿಯಿಂದಾಗಿ ವಾಯುಮಾಲಿನ್ಯ ಹೆಚ್ಚುತ್ತಿದೆ.
ಕಳೆದ ಒಂದು ವಾರದಲ್ಲಿ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚಾಗಿದ್ದು, ಜನರು ಉಸಿರಾಡಲು ಸಂಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ವಾರ 50ರ ಆಸುಪಾಸಿನಲ್ಲಿದ್ದ ವಾಯು ಪ್ರಮಾಣ ಎರಡು-ಮೂರು ದಿನಗಳಲ್ಲಿ 100ರ ಗಡಿ ದಾಟಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ವಾಯು ಗುಣಮಟ್ಟ 50 ಇದ್ದರೆ ಉತ್ತಮ ಗಾಳಿ ಎಂದರ್ಥ. 50-60ರ ಗಡಿಯಲ್ಲಿದ್ದರೆ ಸಾಧಾರಣ ಹಾಗೂ 100-150ರ ಆಸುಪಾಸಿನಲ್ಲಿದ್ದರೆ ಉಸಿರಾಡಲು ಯೋಗ್ಯವಲ್ಲ ಎಂದು ಹೇಳಲಾಗುತ್ತದೆ.
ಸದ್ಯ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ 130 ಗಡಿ ದಾಟಿದೆ.
ಜಯನಗರದಲ್ಲಿ -124 ಎಕ್ಯೂ, ಬಿಟಿಎಂ ಲೇಔಟ್-130 ಎಕ್ಯೂ, ಬಾಪುಜಿನಗರ-110 ಎಕ್ಯೂ, ಪೀಣ್ಯ-141 ಎಕ್ಯೂ, ಸಿಟಿ ರೈಲ್ವೆ ಸ್ಟೆಷನ್ -84 ಎಕ್ಯೂ, ಜಿಗಣಿ-133 ಎಕ್ಯೂ, ನಿಮ್ಹಾನ್ಸ್ ರಸ್ತೆ 114 ಎಕ್ಯೂ, ಹೆಬ್ಬಾಳ -142 ಎಕ್ಯೂವರೆಗೆ ದಾಖಲಾಗಿದೆ.