ತನ್ನ ದೈನಂದಿನ ಚಟುವಟಿಕೆಗಳ ಅದೇ ಬೋರಿಂಗ್ ವೇಳಾಪಟ್ಟಿಯಿಂದ ಒಂದು ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿರುವ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಖೈದಿಗಳಿಗೆ ಕಲಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರತಿ ತಿಂಗಳು ಆಯೋಜಿಸಲು ಆರಂಭಿಸಿದೆ.
ವಿಚಾರಣಾಧೀನರೂ ಸೇರಿದಂತೆ 42 ಖೈದಿಗಳು ಈ ಚಟುವಟಿಕೆಯಲ್ಲಿ ಭಾಗವಹಿಸಿದ್ದಾರೆ. ಪೇಂಟಿಂಗ್ ಸ್ಫರ್ಧೆಯಲ್ಲಿ ಇವರೆಲ್ಲಾ ಭಾಗಿಯಾಗಿದ್ದರು. ಸ್ಫರ್ಧೆಯಲ್ಲಿ ವಿಜೇತರಿಗೆ ಬಹುಮಾನಗಳನ್ನೂ ವಿತರಿಸಲಾಗಿದೆ.
ಕೇವಲ ಖುಷಿಯೊಂದೇ ಅಲ್ಲ ಇದನ್ನೆಲ್ಲ ನೀಡುತ್ತೆ ಶಾರೀರಿಕ ಸಂಬಂಧ
“ಖೈದಿಗಳಲ್ಲಿರುವ ಕಲೆಯನ್ನು ಹೊರಹಾಕಲು ಅವರಿಗೊಂದು ವೇದಿಕೆ ಕೊಟ್ಟು ದಿನನಿತ್ಯದ ಬೋರಿಂಗ್ ವೇಳಾಪಟ್ಟಿಯಿಂದ ಬದಲಾವಣೆ ತರಲು ಕಾರಾಗೃಹ ನಿರ್ಧರಿಸಿದೆ. ಆಫ್ರಿಕಾದ ಕೆಲ ಮಂದಿ ತಂತಮ್ಮ ತವರಿನ ಹಾಡುಗಳನ್ನು ಹಾಡುತ್ತಾ ಜೊತೆಯಲ್ಲಿ ನೃತ್ಯ ಮಾಡುತ್ತಾ ನೆರೆದಿದ್ದ ಸಭಿಕರನ್ನು ರಂಜಿಸಿದ್ದಾರೆ” ಎಂದು ಕಾರಾಗೃಹದ ಉಸ್ತುವಾರಿ ರಂಗನಾಥ್ ತಿಳಿಸಿದ್ದಾರೆ.