ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಸುವ ವೇಳೆ ಚಿಲ್ಲರೆಯದ್ದೇ ದೊಡ್ಡ ಸಮಸ್ಯೆ. ಇದಕ್ಕಾಗಿ ಕೆಲವೊಮ್ಮೆ ದೊಡ್ಡ ಜಗಳಗಳು ಸಹ ನಡೆದಿದೆ. ಇನ್ಮುಂದೆ ಈ ಸಮಸ್ಯೆಗಳಿಗೆ ಕಡಿವಾಣ ಬೀಳಲಿದೆ.
ಹೌದು, ಬಿಎಂಟಿಸಿ ಪ್ರಯಾಣಿಕರು ತಾವು ಪ್ರಯಾಣಿಸಬೇಕಾದ ಸ್ಥಳದ ದರವನ್ನು ಗೂಗಲ್ ಪೇ ಸೇರಿದಂತೆ ಇತರೆ ಯುಪಿಐ ಮೂಲಕ ಪಾವತಿಸಬಹುದಾಗಿದೆ. ಇದಕ್ಕಾಗಿ ಈಗಾಗಲೇ ಒಂಬತ್ತು ಸಾವಿರ ETM ಗೋಳನ್ನು ಖರೀದಿಸಲಾಗಿದೆ.
ಬಿಎಂಟಿಸಿ ಸಿಬ್ಬಂದಿಗೆ ಈಗಾಗಲೇ 1,500 ETM ಗೋಳನ್ನು ವಿತರಿಸಲಾಗಿದೆ ಎಂದು ತಿಳಿದು ಬಂದಿದ್ದು, ಡಿಸೆಂಬರ್ 10 ರ ವೇಳೆಗೆ ಎಲ್ಲ ಬಸ್ಸುಗಳಲ್ಲಿಯೂ ಇದನ್ನು ಆರಂಭಿಸುವ ಸಾಧ್ಯತೆ ಇದೆ.
ಬಿಎಂಟಿಸಿ ಯ ಈ ತೀರ್ಮಾನದಿಂದಾಗಿ ಯುಪಿಐ ಆಧಾರಿತ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಿದ ಮೊದಲ ಸಾರ್ವಜನಿಕ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.